ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಐಎಎಲ್: ದಾಖಲೆ ಪ್ರಮಾಣದ ಮಾವು ರಫ್ತು

Published 6 ಸೆಪ್ಟೆಂಬರ್ 2023, 21:34 IST
Last Updated 6 ಸೆಪ್ಟೆಂಬರ್ 2023, 21:34 IST
ಅಕ್ಷರ ಗಾತ್ರ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಮಾಡಲಾದ ಮಾವು ರಫ್ತಿನಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ಮಾವು ರಫ್ತಿನಲ್ಲಿ ಶೇ 124ರಷ್ಟು ಹೆಚ್ಚಳವಾಗಿದೆ.

ಪ್ರಸಕ್ತ ವರ್ಷದಲ್ಲಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ರಫ್ತು ವಿಭಾಗದ ಮೂಲಕ 6,84,648 ಕೆ.ಜಿ ಮಾವಿನ ಹಣ್ಣು ರವಾನೆ ಆಗಿದೆ. ಹಿಂದಿನ ವರ್ಷದಲ್ಲಿ 3,05,521 ಕೆ.ಜಿ ರಫ್ತಾಗಿತ್ತು. ಈ ಋತುವಿನಲ್ಲಿ ಕಾಯಿಗಳ ರಫ್ತಿನಲ್ಲಿ ಶೇ 86ರಷ್ಟು ಹೆಚ್ಚಳವಾಗಿದೆ.

ವಿಮಾನ ನಿಲ್ದಾಣದ ರಫ್ತು ಜಾಲ 60ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸ್ಥಳಗಳಿಗೆ ಕೊಂಡಿಯಾಗಿದೆ. ಈ ವರ್ಷ ಅಮೆರಿಕಕ್ಕೆ ಗಮನಾರ್ಹ ಪ್ರಮಾಣದಲ್ಲಿ ರಫ್ತು ಹೆಚ್ಚಾಗಿದೆ ಎಂದು ಬಿಐಎಎಲ್ ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT