ಬೆಂಗಳೂರು: ದೇಶದ ಖ್ಯಾತ ಬ್ಯಾಂಕ್ ಉದ್ಯಮಿ ಉದಯ್ ಕೋಟಕ್ (Uday Kotak) ಅವರ ಪುತ್ರ ಜಯ್ ಕೋಟಕ್ (Jay Kotak) ನಟಿ ಅದಿತಿ ಆರ್ಯ (Aditi Arya) ಅವರನ್ನು ಮದುವೆಯಾಗಿದ್ದಾರೆ.

ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ಮಂಗಳವಾರ (ನವೆಂಬರ್ 7) ವಿವಾಹ ಕಾರ್ಯಕ್ರಮ ನೇರವೇರಿತು.

ಜಯ್ ಕೋಟಕ್ ಮತ್ತು ಅದಿತಿ ಆರ್ಯ ಅವರದ್ದು ಪ್ರೇಮ ವಿವಾಹ ಎನ್ನಲಾಗಿದೆ. ಹಲವು ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿತ್ತು ಎಂದು ಜಯ್ ಕೋಟಕ್ ಆಪ್ತರು ಹೇಳಿದ್ದಾರೆ.

ಮದುವೆ ಬಗ್ಗೆ ಜಯ್ ಕೋಟಕ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಈ ಜೋಡಿ 2022ರ ಆಗಸ್ಟ್‌ನಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು ಎಂದು ಜಯ್ ಆಪ್ತರು ಹೇಳಿದ್ದಾರೆ.

ಜಯ್ ಕೋಟಕ್...

ಜಯ್ ಕೋಟಕ್ ಅವರು ಬ್ಯಾಂಕ್ ಉದ್ಯಮಿಯಾಗಿದ್ದಾರೆ. ತಮ್ಮ ತಂದೆ ಉದಯ್ ಕೋಟಕ್ ಅವರು ಸ್ಥಾಪಿಸಿರುವ ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಉನ್ನತ ಹುದ್ದೆ ನಿರ್ವಹಿಸುತ್ತಿದ್ದಾರೆ. ಜಯ್ ಅವರು ಇತಿಹಾಸದಲ್ಲಿ ಪದವಿ ಹಾಗೂ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಪಡೆದಿದ್ದಾರೆ.

ಅದಿತಿ ಆರ್ಯ...

ನಟಿ ಅದಿತಿ ಆರ್ಯ ಮಾಜಿ ಮಿಸ್ ಇಂಡಿಯಾ ಕೂಡ ಆಗಿದ್ದಾರೆ. ಕನ್ನಡ ಸೇರಿದಂತೆ ಬಾಲಿವುಡ್ ಹಾಗೂ ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಕುರುಕ್ಷೇತ್ರ ಚಿತ್ರದಲ್ಲಿ ಅವರು ನಟಿಸಿದ್ದಾರೆ. 2016ರಲ್ಲಿ ತೆಲುಗಿನ ‘ಇಸಂ‘ ಸಿನಿಮಾದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು.

ಅದಿತಿ ದೆಹಲಿ ವಿಶ್ವವಿದ್ಯಾಲಯದಿಂದ ಬಿಬಿಎ ಹಾಗೂ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.