ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ಬಾಡಿ ಶಾಪ್‌ನ ಹಬ್ಬದ ಉಡುಗೊರೆ

Last Updated 1 ನವೆಂಬರ್ 2020, 4:19 IST
ಅಕ್ಷರ ಗಾತ್ರ

ಬೆಂಗಳೂರು: ಸೌಂದರ್ಯ ಪ್ರಸಾಧನಗಳ ಜಾಗತಿಕ ಬ್ರ್ಯಾಂಡ್‌ ಆಗಿರುವ ದಿ ಬಾಡಿ ಶಾಪ್‌, ಜನರು ತಮ್ಮ ಪ್ರೀತಿಪಾತ್ರರಿಗೆ ಈ ಬಾರಿಯ ಹಬ್ಬದ ಸಂದರ್ಭದಲ್ಲಿ ಉಡುಗೊರೆ ರೂಪದಲ್ಲಿ ಸಿಹಿ ತಿನಿಸು, ಒಣ ಹಣ್ಣುಗಳು ಮತ್ತಿತರ ವಸ್ತುಗಳನ್ನು ನೀಡುವುದರ ಬದಲಿಗೆ ದೇಹದ ಆರೈಕೆಗೆ ನೆರವಾಗುವ ಉತ್ಪನ್ನಗಳ ಉಡುಗೊರೆ ಸೌಲಭ್ಯ ಪರಿಚಯಿಸಿದೆ.

ಈ ಹಬ್ಬದ ಋತುವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿರುವ ದಿ ಬಾಡಿ ಶಾಪ್ ಇಂಡಿಯಾ, ತ್ಯಾಜ್ಯ ಆಯುವ ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರುವ ಉದ್ದೇಶದಿಂದ ಪ್ಲಾಸ್ಟಿಕ್ ಫಾರ್ ಚೇಂಜ್ (ಪಿಎಫ್‍ಸಿ) ಇಂಡಿಯಾ ಫೌಂಡೇಷನ್ ಜತೆಗೂ ಕೈಜೋಡಿಸಿದೆ.

ತ್ಯಾಜ್ಯ ಆಯುವ ಮಹಿಳೆಯರ ನೆರವಿಗಾಗಿ ಹಣ ಸಂಗ್ರಹಸಲು ದಿ ಬಾಡಿ ಶಾಪ್‍ ಪ್ರಾಜೆಕ್ಟ್ ಎನ್.ಎ.ಆರ್.ಐ ನಿಧಿ ಸ್ಥಾಪಿಸಿದೆ. ಈ ಉದ್ದೇಶಕ್ಕೆ ತನ್ನೆಲ್ಲ ಮಳಿಗೆ ಮತ್ತು ಆನ್‍ಲೈನ್ ತಾಣದಲ್ಲಿ ‘ಪ್ರಾಜೆಕ್ಟ್ ಎನ್.ಎ.ಆರ್.ಐ ವಂತಿಗೆ ಸಂಗ್ರಹಿಸಲು ವ್ಯವಸ್ಥೆ ಮಾಡಿದೆ. ಗ್ರಾಹಕರು ಸ್ವಯಂಪ್ರೇರಣೆಯಿಂದ ₹ 20 ದೇಣಿಗೆ ನೀಡಲು ಅವಕಾಶ ಕಲ್ಪಿಸಿದೆ. ಈ ಸದುದ್ದೇಶವನ್ನು ಯಶಸ್ವಿಯಾಗಿ ಸಾಕಾರಗೊಳಿಸಲು, ಗ್ರಾಹಕರ ಪ್ರತಿಯೊಂದು ವಂತಿಗೆಗೆ ಪೂರಕವಾಗಿ ದಿ ಬಾಡಿ ಶಾಪ್‍ ಕೂಡ ಅಷ್ಟೇ ಮೊತ್ತವನ್ನು ದೇಣಿಗೆಯಾಗಿ ನೀಡಲಿದೆ. ಈ ಕಾರ್ಯಕ್ರಮದ ನೆರವಿನಿಂದ ಮುಂದಿನ 6 ತಿಂಗಳಲ್ಲಿ ₹ 50 ಲಕ್ಷ ಸಂಗ್ರಹಿಸಲು ಉದ್ದೇಶಿಸಿದೆ. ತ್ಯಾಜ್ಯ ಆಯುವ ಮಹಿಳೆಯರ ‘ಪೋಷಣೆ - ಸಾಮರ್ಥ್ಯ – ಮರುತರಬೇತಿ - ಸೇರ್ಪಡೆ ಯೋಜನೆ’ ಜಾರಿಗೆ ತರಲು ಈ ಮೊತ್ತವನ್ನು ಸದ್ಬಳಕೆ ಮಾಡಲಿದೆ.

‘ಪ್ರಾಜೆಕ್ಟ್ ಎನ್.ಎ.ಆರ್.ಐ ಮೂಲಕ, ಕೋವಿಡ್-19ನಿಂದಾಗಿ ತಮ್ಮ ಜೀವಕ್ಕೆ ಮತ್ತು ಜೀವನೋಪಾಯಕ್ಕೆ ಅಸಾಮಾನ್ಯ ಬಗೆಯಲ್ಲಿ ಬೆದರಿಕೆ ಎದುರಿಸುತ್ತಿರುವ ತ್ಯಾಜ್ಯ ಆಯುವ ಮಹಿಳೆಯರ ಬದುಕಿನಲ್ಲಿ ನಿಜವಾದ ಬದಲಾವಣೆ ತರುವ ನಿಟ್ಟಿನಲ್ಲಿಯೂ ನಾವು ಕಾರ್ಯನಿರ್ವಹಿಸುತ್ತಿದ್ದೇವೆ‘ ಎಂದು ದಿ ಬಾಡಿ ಶಾಪ್ ಇಂಡಿಯಾದ ಸಿಇಒ ಸೃಷ್ಟಿ ಮಲ್ಹೋತ್ರಾ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT