ಶನಿವಾರ, ಸೆಪ್ಟೆಂಬರ್ 18, 2021
27 °C

ಬ್ರೈಡ್ಸ್‌ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನ ಮತ್ತು ವಜ್ರದ ಆಭರಣಗಳ ಮಾರಾಟ ಕಂಪನಿಯಾದ ಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ಸ್ ತನ್ನ ‘ಬ್ರೈಡ್ಸ್ ಆಫ್ ಇಂಡಿಯಾ’ ಅಭಿಯಾನದ 9ನೇ ಆವೃತ್ತಿಗೆ ಚಾಲನೆ ನೀಡಿದೆ.

ಈ ಅಭಿಯಾನದ ವಿಶೇಷ ಗೀತೆಯನ್ನಾಗಿ #MakeWayForTheBride ಅನ್ನು ಕಂಪನಿ ಸಿದ್ಧಪಡಿಸಿದೆ. ‘ಕಲಾತ್ಮಕವಾಗಿ ಚಿತ್ರೀಕರಿಸಲಾದ ಮೂರು ನಿಮಿಷಗಳ ಗೀತೆಯ ವಿಡಿಯೊವನ್ನು ಆನ್‌ಲೈನ್‌ ಮೂಲಕ ಬಿಡುಗಡೆ ಮಾಡಿದ 48 ಗಂಟೆಗಳಲ್ಲಿ 20 ಲಕ್ಷ ವೀಕ್ಷಕರು ನೋಡಿದ್ದಾರೆ’ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ಬ್ರ್ಯಾಂಡ್ ರಾಯಭಾರಿಗಳಾದ ಅನಿಲ್ ಕಪೂರ್ ಮತ್ತು ಕರೀನಾ ಕಪೂರ್ ಹಾಗೂ ದೇಶದ ವಿವಿಧ ಭಾಗಗಳ ವಧುಗಳನ್ನು ಒಳಗೊಂಡ ಈ ಗೀತಿಯನ್ನು ವಿಶಿಷ್ಟವಾಗಿ ಚಿತ್ರೀಕರಿಸಲಾಗಿದೆ. ಈ ವಿವಾಹ ಗೀತೆಯ ಕಿರು ಆವೃತ್ತಿಯನ್ನು ಜಾಹೀರಾತು ರೂಪದಲ್ಲಿ ದೂರದರ್ಶನ ವಾಹಿನಿಗಳಲ್ಲಿ, ಒಟಿಟಿ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಅದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.