ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget 2023- ಈ ಬಾರಿಯ ಬಜೆಟ್‌ನಲ್ಲಿ ಬ್ಯಾಂಕ್‌ಗಳಿಗೆ ನೆರವು ಅನುಮಾನ

Last Updated 23 ಜನವರಿ 2023, 3:57 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಯು ಸುಧಾರಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅವುಗಳ ಒಟ್ಟು ನಿವ್ವಳ ಲಾಭವು ₹ 1 ಲಕ್ಷ ಕೋಟಿ ಆಗುವ ನಿರೀಕ್ಷೆ ಇದೆ. ಹೀಗಾಗಿ ಕೇಂದ್ರ ಸರ್ಕಾರವು 2023–24ನೇ ಸಾಲಿನ ಬಜೆಟ್‌ನಲ್ಲಿ ಬಂಡವಾಳ ನೆರವು ಘೋಷಣೆ ಮಾಡುವುದು ಅನುಮಾನ ಎಂದು ಮೂಲಗಳು ಹೇಳಿವೆ.

ಬ್ಯಾಂಕ್‌ಗಳ ಬಂಡವಾಳ ಲಭ್ಯತೆ ಪ್ರಮಾಣವು ಅಗತ್ಯಕ್ಕಿಂತಲೂ ಹೆಚ್ಚಿಗೆ ಇದ್ದು, ಶೇ 14 ರಿಂದ ಶೇ 20ರ ಒಳಗೆ ಇದೆ. ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹ ಮಾಡುತ್ತಿರುವುದಷ್ಟೇ ಅಲ್ಲದೆ, ಪ್ರಮುಖವಲ್ಲದ ಆಸ್ತಿಗಳನ್ನು ಸಹ ಮಾರಾಟ ಮಾಡುತ್ತಿವೆ ಎಂದು ತಿಳಿಸಿವೆ.

ಕೇಂದ್ರ ಸರ್ಕಾರವು ಈ ಹಿಂದೆ 2021–22ರಲ್ಲಿ ಬ್ಯಾಂಕ್‌ಗಳಿಗೆ ₹20 ಸಾವಿರ ಕೋಟಿ ನೆರವು ನೀಡಿತ್ತು. 2016–17 ರಿಂದ 2020–21ರ ಅವಧಿಯಲ್ಲಿ ಸರ್ಕಾರಿ ಬ್ಯಾಂಕ್‌ಗಳಿಗೆ ಒಟ್ಟು ₹3.10 ಲಕ್ಷ ಕೋಟಿ ಬಂಡವಾಳ ನೆರವನ್ನು ಸರ್ಕಾರ ನೀಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರುವರಿ 1ರಂದು ಬಜೆಟ್‌ ಮಂಡಿಸಲಿದ್ದಾರೆ. ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ₹15,306 ಕೋಟಿ ಲಾಭ ಗಳಿಸಿವೆ. ಎರಡನೇ ತ್ರೈಮಾಸಿಕದ ಒಟ್ಟು ಲಾಭವು ₹25,685 ಕೋಟಿ ಆಗಿದೆ. ವರ್ಷದಿಂದ ವರ್ಷಕ್ಕೆ ಮೊದಲ ತ್ರೈಮಾಸಿಕದಲ್ಲಿ ಲಾಭವು ಶೇ 9ರಷ್ಟು ಬೆಳವಣಿಗೆ ಕಂಡಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ 50ಕ್ಕೆ ಏರಿಕೆ ಆಗಿದೆ.

ಎರಡನೇ ತ್ರೈಮಾಸಿಕದಲ್ಲಿ ಎಸ್‌ಬಿಐ ₹13,265 ಕೋಟಿಯಷ್ಟು ಗರಿಷ್ಠ ಲಾಭ ಗಳಿಸಿದೆ.

ಹಣಕಾಸು ವರ್ಷದ ಮೊದಲಾರ್ಧದಲ್ಲಿ ನಿವ್ವಳ ಲಾಭವು ಶೇ 32ರಷ್ಟು ಹೆಚ್ಚಾಗಿ ₹40,991 ಕೋಟಿಗೆ ತಲುಪಿದೆ. 2021–22ನೇ ಹಣಕಾಸು ವರ್ಷದಲ್ಲಿ ಕೋವಿಡ್‌ ಸೃಷ್ಟಿಸಿದ್ದ ಒತ್ತಡದ ಹೊರತಾಗಿಯೂ ನಿವ್ವಳ ಲಾಭ ₹66,539 ಕೋಟಿಯಷ್ಟು ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT