ಮುಕ್ತ ವಾಣಿಜ್ಯ ವ್ಯವಸ್ಥೆಗೆ ಮೋದಿ, ಪುಟಿನ್ ಕರೆ

7

ಮುಕ್ತ ವಾಣಿಜ್ಯ ವ್ಯವಸ್ಥೆಗೆ ಮೋದಿ, ಪುಟಿನ್ ಕರೆ

Published:
Updated:

ನವದೆಹಲಿ: ‘ಮುಕ್ತ, ಪಾರದರ್ಶಕ, ತಾರತಮ್ಯವಿಲ್ಲದ, ಎಲ್ಲರನ್ನೂ ಒಳಗೊಳ್ಳುವ ಮತ್ತು ನಿಯಮಗಳ ಆಧರಿತ ಬಹುರಾಷ್ಟ್ರೀಯ ವಾಣಿಜ್ಯ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಜಾಗತಿಕ ವಾಣಿಜ್ಯ ಸಂಬಂಧಗಳಲ್ಲಿ ಉಂಟಾಗುವ ಸಂಘರ್ಷವನ್ನು ತಡೆಯುವ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಂಟಿ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.

ಎಂಟು ಒಪ್ಪಂದಗಳಿಗೆ ಸಹಿ

* 5 ಎಸ್‌–400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆಗಳ ಖರೀದಿಗೆ ಒಪ್ಪಂದ

* ₹ 40,000 ಕೋಟಿ ಒಪ್ಪಂದ ಮೊತ್ತ (ಶುಕ್ರವಾರದ ಡಾಲರ್ ವಿನಿಮಯ ದರ ಆಧರಿಸಿ)

* ಭಾರತದ ಗಗನಯಾನಿಗಳಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತರಬೇತಿ ನೀಡಲು ರಷ್ಯಾ ಒಪ್ಪಿಕೊಂಡಿದೆ

* ನಾಗರಿಕ ಪರಮಾಣು ಸಹಕಾರಕ್ಕೆ ಬಲ. ರಷ್ಯಾವು ಕೂಡಂಕುಳಂನಲ್ಲಿನ ಅಣುವಿದ್ಯುತ್ ಸ್ಥಾವರಗಳ ನಿರ್ಮಾಣ ಪೂರ್ಣಗೊಂಡ ನಂತರ ಇನ್ನೊಂದು ಸ್ಥಾವರ ಅಭಿವೃದ್ಧಿಗೆ ಜಾಗ ನೀಡಲು ಭಾರತದ ಒಪ್ಪಿಗೆ 

* ನಾಲ್ಕು ಯುದ್ಧನೌಕೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಲ್ಲಿ ಎರಡು ರಷ್ಯಾದಲ್ಲೇ ತಯಾರಾಗಲಿವೆ. ಉಳಿದ ಎರಡು ಭಾರತದಲ್ಲಿ ತಯಾರಾಗಲಿವೆ

* ರಷ್ಯಾದ ಕಮೋವ್ ಕದನ ಹೆಲಿಕಾಪ್ಟರ್‌ಗಳನ್ನು ಭಾರತವು ಖರೀದಿಸಲಿದೆ. ತಂತ್ರಜ್ಞಾನ ವರ್ಗಾವಣೆ ಆಧಾರದಲ್ಲಿ ಈ ಹೆಲಿಕಾಪ್ಟರ್‌ಗಳನ್ನು ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ನಿರ್ಮಿಸಲಿದೆ

* ರೈಲ್ವೆ ಮತ್ತು ಸಾರಿಗೆ ಕ್ಷೇತ್ರದಲ್ಲಿ ಸಹಕಾರ

* ಕೃಷಿ ಕ್ಷೇತ್ರದಲ್ಲಿ ಸಹಕಾರ

* ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !