ಕೆನರಾ ಬ್ಯಾಂಕ್ ಲಾಭ ಶೇ 92ರಷ್ಟು ಜಿಗಿತ

ನವದೆಹಲಿ (ಪಿಟಿಐ): ಕೆನರಾ ಬ್ಯಾಂಕ್‌ನ ಡಿಸೆಂಬರ್ ತ್ರೈಮಾಸಿಕದ ಲಾಭದಲ್ಲಿ ಶೇಕಡ 92ರಷ್ಟು ಏರಿಕೆ ಆಗಿದೆ. ಬಡ್ಡಿಯಿಂದ ಸಿಗುವ ಆದಾಯವು ಹೆಚ್ಚಳ ಆಗಿದ್ದು ಹಾಗೂ ಅನುತ್ಪಾದಕ ಸಾಲಗಳ ಪ್ರಮಾಣವು ಕಡಿಮೆ ಆಗಿದ್ದು ಲಾಭ ಏರಿಕೆಗೆ ನೆರವಾಗಿವೆ.
2022–23ರ ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ ₹ 2,882 ಕೋಟಿ ಲಾಭ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ನ ಲಾಭ ₹ 1,502 ಕೋಟಿ ಆಗಿತ್ತು.
ಬಡ್ಡಿಯಿಂದ ಸಿಗುವ ಆದಾಯವು ₹ 22,231 ಕೋಟಿಗೆ ಹೆಚ್ಚಳವಾಗಿದೆ. ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಇದು ₹ 17,701 ಕೋಟಿ ಮಾತ್ರ ಆಗಿತ್ತು. ಬ್ಯಾಂಕ್‌ನ ಒಟ್ಟು ಎನ್‌ಪಿಎ ಪ್ರಮಾಣವು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 7.80 ಇದ್ದಿದ್ದು, ಈಗ ಶೇ 5.89ಕ್ಕೆ ಇಳಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ಎಸ್‌ಬಿಐಗೆ ಮಾರಾಟ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಜೊತೆಗೂಡಿ ಕೆನರಾ ಬ್ಯಾಂಕ್, ರಷ್ಯಾದಲ್ಲಿ ಆರಂಭಿಸಿದ ‘ಕಮರ್ಷಿಯಲ್ ಇಂಡೊ ಬ್ಯಾಂಕ್’ಅನ್ನು ₹ 114 ಕೋಟಿಗೆ ಎಸ್‌ಬಿಐಗೆ ಮಾರಾಟ ಮಾಡುತ್ತಿರುವುದಾಗಿ ಕೆನರಾ ಬ್ಯಾಂಕ್ ಹೇಳಿದೆ.
ಜಂಟಿ ಪಾಲುದಾರಿಕೆಯ ಈ ಬ್ಯಾಂಕ್ ಮಾಸ್ಕೊದಲ್ಲಿ ಇದೆ. ಇದರಲ್ಲಿ ಕೆನರಾ ಬ್ಯಾಂಕ್ ಶೇ 40ರಷ್ಟು ಪಾಲು ಹೊಂದಿದೆ. ಈಗ ಕೆನರಾ ಬ್ಯಾಂಕ್, ಷೇರು ಮಾರಾಟ ಮಾಡುವ ಬಗ್ಗೆ ಎಸ್‌ಬಿಐ ಜೊತೆ ಒಪ್ಪಂದ ಮಾಡಿಕೊಂಡಿದೆ. ವಹಿವಾಟು ಈ ವರ್ಷದ ಮಾರ್ಚ್ 31ಕ್ಕೆ ಮೊದಲು ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.