ಮಂಗಳವಾರ, ಮಾರ್ಚ್ 2, 2021
26 °C
ಮೊದಲ ಬಾರಿಗೆ ₹20 ಲಕ್ಷ ಕೋಟಿಗೆ ಏರಿಕೆ

ನಗದು ಚಲಾವಣೆ ಹೆಚ್ಚಳ: ಆರ್‌ಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ದೇಶದಲ್ಲಿ ಒಟ್ಟಾರೆ ಚಲಾವಣೆಯಲ್ಲಿ ಇರುವ ನಗದು ಪ್ರಮಾಣವು ಇದೇ ಮೊದಲ ಬಾರಿಗೆ ₹ 20 ಲಕ್ಷ ಕೋಟಿ ದಾಟಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ನವೆಂಬರ್‌ 16ಕ್ಕೆ ಚಲಾವಣೆಯಲ್ಲಿದ್ದ ನಗದಿನ ಪ್ರಮಾಣವು ₹ 20.15 ಲಕ್ಷ ಕೋಟಿಗಳಷ್ಟಿತ್ತು.

2016ರ ನವೆಂಬರ್‌ನಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರದ ದಿನಗಳಲ್ಲಿ ಚಲಾವಣೆಯಲ್ಲಿದ್ದ ನಗದು ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿತ್ತು. ಆ ವರ್ಷದ ಡಿಸೆಂಬರ್‌ 23ರಂದು ₹ 9.4 ಲಕ್ಷ ಕೋಟಿ ನಗದು ಚಲಾವಣೆಯಲ್ಲಿತ್ತು. ಅದಕ್ಕೆ ಹೋಲಿಸಿದರೆ ಸದ್ಯಕ್ಕೆ ಚಲಾವಣೆಯಲ್ಲಿ ಇರುವ ನಗದು ಪ್ರಮಾಣವು 1.14 ಪಟ್ಟು ಹೆಚ್ಚಾಗಿದೆ.

ನೋಟು ರದ್ದತಿ ಮುಂಚಿನ ದಿನಗಳಲ್ಲಿ ಚಲಾವಣೆಯಲ್ಲಿದ್ದ ನಗದು ಪ್ರಮಾಣವು ₹ 17.97 ಲಕ್ಷ ಕೋಟಿಗಳಷ್ಟಿತ್ತು. ಅದಕ್ಕೆ ಹೋಲಿಸಿದರೆ ಸದ್ಯದ ಚಲಾವಣೆಯಲ್ಲಿರುವ ನಗದು ಶೇ 12.1ರಷ್ಟು ಹೆಚ್ಚಾಗಿದೆ.

ಒಂದು ವರ್ಷದಿಂದೀಚೆಗೆ ಆರ್‌ಬಿಐ, ₹ 3.56 ಲಕ್ಷ ಕೋಟಿ ಚಲಾವಣೆಗೆ ತಂದಿದೆ. ಕೆಲ ತಿಂಗಳ ಹಿಂದೆ ಉದ್ಭವಿಸಿದ್ದ ನಗದುತನ ಕೊರತೆ ನೀಗಿಸಲು ಹೆಚ್ಚುವರಿ ನಗದನ್ನು ಮಾರುಕಟ್ಟೆಗೆ ತರಲಾಗಿತ್ತು.

ನಗದುರಹಿತ (ಡಿಜಿಟಲ್‌) ವಹಿವಾಟಿನ ಬಗ್ಗೆ ಪ್ರತಿ ತಿಂಗಳೂ ಅಂಕಿ ಅಂಶ ಬಿಡುಗಡೆ ಮಾಡುತ್ತಿದ್ದ ಆರ್‌ಬಿಐ, ಫೆಬ್ರುವರಿ ತಿಂಗಳಿನಿಂದೀಚೆಗೆ ಇದನ್ನು ಕೈಬಿಟ್ಟಿದೆ. ಈ ವರ್ಷದ ಫೆಬ್ರುವರಿಯಲ್ಲಿನ ತಿಂಗಳ ಡಿಜಿಟಲ್‌ ಪಾವತಿಯ ಒಟ್ಟಾರೆ ಮೊತ್ತವು ₹ 115.5 ಲಕ್ಷ ಕೋಟಿಗಳಷ್ಟಿತ್ತು.

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌, ಯುಪಿಐ, ಮೊಬೈಲ್‌ ವಾಲೆಟ್‌ ಮತ್ತು ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ನಡೆಯುವ ನಗದುರಹಿತ ವಹಿವಾಟು ಕಡಿಮೆಯಾಗುತ್ತಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು