ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಇಲಾಖೆಯ ಸುಧಾರಿತ ಜಾಲತಾಣ ಬಿಡುಗಡೆ

Published 26 ಆಗಸ್ಟ್ 2023, 15:43 IST
Last Updated 26 ಆಗಸ್ಟ್ 2023, 15:43 IST
ಅಕ್ಷರ ಗಾತ್ರ

ನವದೆಹಲಿ: ಬಳಕೆದಾರ ಸ್ನೇಹಿ ಮತ್ತು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸುಧಾರಿತ ಆದಾಯ ತೆರಿಗೆ ಜಾಲತಾಣವನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ಉದಯಪುರದಲ್ಲಿ ಆದಾಯ ತೆರಿಗೆ ನಿರ್ದೇಶನಾಲಯವು ಆಯೋಜಿಸಿದ್ದ ಚಿಂತನ ಶಿಬಿರದಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷ ನಿತಿನ್‌ ಗುಪ್ತಾ ಅವರು ಜಾಲತಾಣಕ್ಕೆ ಚಾಲನೆ ನೀಡಿದರು.

ತೆರಿಗೆಪಾವತಿದಾರಿಗೆ ಜಾಲತಾಣದ ಬಳಕೆಯನ್ನು ಇನ್ನಷ್ಟು ಸುಲಭಗೊಳಿಸಲು ಮತ್ತು ಹೊಸ ತಂತ್ರಜ್ಞಾನದೊಟ್ಟಿಗೆ ನಡೆಯಲು ಬಳಕೆದಾರ ಸ್ನೇಹಿ ಮತ್ತು ಹೊಸ ವೈಶಿಷ್ಟ್ಯಗಳಿರುವ www.incometaxindia.gov.in ಜಾಲತಾಣ ಬಿಡುಗಡೆ ಮಾಡಲಾಗಿದೆ ಎಂದು ಸಿಬಿಡಿಟಿ ಪ್ರಕಟಣೆ ತಿಳಿಸಿದೆ.

ಮೊಬೈಲ್‌ನಲ್ಲಿಯೂ ಸುಲಭವಾಗಿ ಬಳಸಲು ಆಗುವಂತೆ ಜಾಲತಾಣವನ್ನು ಮರುವಿನ್ಯಾಸಗೊಳಿಸಲಾಗಿದೆ. ವಿವಿಧ ಕಾಯ್ದೆಗಳು, ಸೆಕ್ಷನ್‌ಗಳು, ನಿಮಯಗಳು ಮತ್ತು ತೆರಿಗೆ ಒಪ್ಪಂದಗಳನ್ನು ಹೋಲಿಸಿ ನೋಡಲು ಅನುಕೂಲ ಮಾಡಿಕೊಡಲಿದೆ. ವಿವಿಧ ರಿಟರ್ನ್ಸ್‌ಗಳನ್ನು ಸಲ್ಲಿಸಲು ಇರುವ ಗಡುವಿನ ಬಗ್ಗೆಯೂ ಜಾಲತಾಣವು ಎಚ್ಚರಿಸಲಿದೆ ಎಂದು ತಿಳಿಸಿದೆ.

ಹೆಚ್ಚುವರಿ ವೈಶಿಷ್ಟ್ಯಗಳ ವರ್ಚುವಲ್‌ ಟೂರ್‌ ಮೂಲಕ ಬಳಕೆದಾರರಿಗೆ ಮಾಹಿತಿಗಳನ್ನು ನೀಡುವ ವ್ಯವಸ್ಥೆಯನ್ನೂ ಜಾಲತಾಣದಲ್ಲಿ ಮಾಡಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT