ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್–ಫ್ಯೂಚರ್ ಒಪ್ಪಂದಕ್ಕೆ ಸಿಸಿಐ ಒಪ್ಪಿಗೆ

Last Updated 20 ನವೆಂಬರ್ 2020, 21:17 IST
ಅಕ್ಷರ ಗಾತ್ರ

ನವದೆಹಲಿ: ಫ್ಯೂಚರ್‌ ಸಮೂಹದ ರಿಟೇಲ್ ಮತ್ತು ಸಗಟು, ಗೋದಾಮು ಹಾಗೂ ಸರಕು ಸಾಗಣೆ ವಹಿವಾಟುಗಳ ಖರೀದಿಗೆ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಮಂಡಿಸಿರುವ ಪ್ರಸ್ತಾವನೆಗೆ ಭಾರತೀಯ ಸ್ಪರ್ಧಾ ಆಯೋಗ ಅನುಮೋದನೆ ನೀಡಿದೆ.

₹ 24,713 ಕೋಟಿ ಮೊತ್ತದ ಈ ಖರೀದಿ ಘೋಷಣೆಯು ಆಗಸ್ಟ್‌ನಲ್ಲಿ ಹೊರಬಿದ್ದಿದೆ. ಈ ಖರೀದಿಯ ನಂತರ ರಿಲಯನ್ಸ್ ಸಮೂಹದ ರಿಟೇಲ್‌ ವಹಿವಾಟುಗಳಿಗೆ ಹೆಚ್ಚಿನ ಬಲ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಫ್ಯೂಚರ್ ಸಮೂಹ ಮತ್ತು ರಿಲಯನ್ಸ್ ನಡುವಣ ಈ ಒಪ್ಪಂದವನ್ನು ಅಮೆಜಾನ್‌ ವಿರೋಧಿಸಿದೆ. ಅಮೆಜಾನ್‌ ಕಂಪನಿಯು ಫ್ಯೂಚರ್ ಸಮೂಹದ ಕೆಲವು ಕಂಪನಿಗಳಲ್ಲಿ ಶೇಕಡ 49ರಷ್ಟು ಪಾಲು ಹೊಂದಿದೆ. ಫ್ಯೂಚರ್ ರಿಟೇಲ್‌ ಲಿಮಿಟೆಡ್‌ ಕಂಪನಿಯನ್ನು ಖರೀದಿಸುವ ಹಕ್ಕು ಕೂಡ ತನಗೆ ಇದೆ ಎಂದು ಅಮೆಜಾನ್‌ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT