ಭಾನುವಾರ, ನವೆಂಬರ್ 17, 2019
24 °C

ಚಾಲಿ ಅಡಿಕೆ ದರ ಚೇತರಿಕೆ

Published:
Updated:
Prajavani

ಶಿರಸಿ: ಒಂದು ವಾರದಿಂದ ಏರುಗತಿಯಲ್ಲಿ ಸಾಗಿರುವ ಚಾಲಿ ಅಡಿಕೆ ದರ, ಶುಕ್ರವಾರ ಇಲ್ಲಿನ ಟಿಎಸ್‌ಎಸ್‌ ಸೇಲ್‌ ಯಾರ್ಡ್‌ನಲ್ಲಿ ಕ್ವಿಂಟಲ್‌ವೊಂದಕ್ಕೆ ₹ 26,700ಕ್ಕೆ ಮಾರಾಟವಾಗುವ ಮೂಲಕ ಈ ವರ್ಷದ ಹಂಗಾಮಿನಲ್ಲಿ ಗರಿಷ್ಠ ದರ ದಾಖಲಿಸಿದೆ.

ವಾರದ ಹಿಂದೆ ಚಾಲಿ ಅಡಿಕೆ ಒಂದು ಕ್ವಿಂಟಲ್‌ಗೆ ಕನಿಷ್ಠ ₹ 22,800ರಿಂದ ಗರಿಷ್ಠ ₹ 25,400ಕ್ಕೆ ಮಾರಾಟವಾಗಿತ್ತು. ಪ್ರತಿ ಕ್ವಿಂಟಲ್‌ ಮೇಲೆ ₹1,500 ಹೆಚ್ಚಳವಾಗಿದೆ. ಕೆಂಪಡಿಕೆಗೆ ಸಹ ಕ್ವಿಂಟಲ್‌ಗೆ ₹ 31,000ದಿಂದ ₹ 32,200 ದರ ಲಭ್ಯವಾಗುತ್ತಿದ್ದು, ಚೇತರಿಕೆಯ ಹಾದಿಯಲ್ಲಿ ಸಾಗಿದೆ.

‘ಮಂಗಳೂರು ಮಾರುಕಟ್ಟೆಯಲ್ಲಿ ಎರಡು ವರ್ಷಗಳಿಂದ ಮಾರಾಟ ಮಾಡದೇ ಉಳಿದಿದ್ದ ಚಾಲಿ ಅಡಿಕೆ ದಾಸ್ತಾನು ಈಗ ಖಾಲಿಯಾಗಿದೆ. ಹೀಗಾಗಿ ದರ ಏರಿಕೆಯಾಗಿದೆ. ಇನ್ನೂ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಈ ಏರಿಕೆ ತಾತ್ಕಾಲಿಕ ಎಂಬುದನ್ನು ಅಡಿಕೆ ಬೆಳೆಗಾರರು ಗಮನಿಸಬೇಕು’ ಎಂದು ಟಿಎಸ್‌ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)