ನವದೆಹಲಿ: ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್ಟಿ ಫೆ. 1ರಿಂದ ಜಾರಿಗೆ ಬರಲಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ.

2017ರ ಜುಲೈ 1ಕ್ಕೆ ಜಾರಿಗೆ ಬಂದ ಜಿಎಸ್ಟಿಯಲ್ಲಿ ಸಿಗರೇಟು ಮತ್ತು ಪಾನ್ ಮಸಾಲಾ ಮೇಲೆ ಹಾಲಿ ಇರುವ ಶೇ 28ರ ಜಿಎಸ್ಟಿ ಬದಲಾಗಲಿದೆ. ಆರೋಗ್ಯದ ಮೇಲೆ ಹಾನಿ ಮಾಡಬಹುದಾದ ಈ ಉತ್ಪನ್ನಗಳ ಮೇಲೆ ಪರಿಹಾರ ಸೆಸ್ ಕೂಡಾ ಈಗ ವಿಧಿಸಲಾಗಿದೆ.

ಈ ಉತ್ಪನ್ನಗಳ ಮೇಲೆ ಗರಿಷ್ಠ ಮಾರಾಟ ಬೆಲೆ (ಎಂಆರ್ಪಿ) ಆಧಾರಿತ ಮೌಲ್ಯಮಾಪನ ಕಾರ್ಯವಿಧಾನವೂ ಫೆ. 1ರಿಂದ ಜಾರಿಗೆ ಬರಲಿದೆ. ಇದರಲ್ಲಿ ಅಗಿಯುವ ತಂಬಾಕು, ಫಿಲ್ಟರ್ ಖೈನಿ, ಜರ್ದಾ, ಸುವಾಸನೆ ಭರಿತ ತಂಬಾಕು, ಗುಟ್ಕಾ ಸೇರಿದೆ. ಈ ಉತ್ಪನ್ನಗಳ ಮೇಲೆ ನಮೂದಿಸಲಾದ ಬೆಲೆಯನ್ನು ಆಧರಿಸಿ ಜಿಎಸ್ಟಿ ನಿರ್ಧರಿಸಲಾಗುತ್ತದೆ.

ಹೊಸ ಪರವಾನಿಗೆ ಅರ್ಜಿ ಸಲ್ಲಿಸುವುದು ಅಗತ್ಯ

ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಕಾನೂನು ಅಡಿಯಲ್ಲಿ ಪಾನ್ ಮಸಾಲಾ ತಯಾರಿಕ ಕಂಪನಿಗಳು ಫೆ.1ರಿಂದ ಹೊಸದಾಗಿ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಇಂಥ ಉತ್ಪನ್ನಗಳ ತಯಾರಕರು ಪ್ಯಾಕಿಂಗ್ ಯಂತ್ರದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಮತ್ತು ಅವುಗಳ ದೃಶ್ಯಗಳನ್ನು ಮುಂದಿನ 24 ತಿಂಗಳವರೆಗೂ ಕಾಯ್ದುಕೊಳ್ಳಬೇಕಾದ್ದು ಕಡ್ಡಾಯ ಎಂಬ ಷರತ್ತು ವಿಧಿಸಲಾಗಿದೆ.

ಘಟಕದಲ್ಲಿರುವ ಯಂತ್ರಗಳ ಸಂಖ್ಯೆ ಮತ್ತು ಅವುಗಳ ಸಾಮರ್ಥ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಒಂದೊಮ್ಮೆ ಯಾವುದೇ ಯಂತ್ರ ಕನಿಷ್ಠ 15 ದಿನಗಳವರೆಗೆ ಕಾರ್ಯ ನಿರ್ವಹಿಸದಿದ್ದರೆ ಅಬಕಾರಿ ಸುಂಕ ವಿನಾಯಿತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಎಂಥ ಸಿಗರೇಟಿನ ಮೇಲೆ ಎಷ್ಟು ತೆರಿಗೆ..?

ಈ ಉತ್ಪನ್ನಗಳ ಮೇಲೆ ಫೆ. 1ರಿಂದ ಜಾರಿಗೆ ಬರುತ್ತಿರುವ ನೂತನ ತೆರಿಗೆಯಲ್ಲಿ, ಸಿಗರೇಟಿನ ಉದ್ದಕ್ಕೆ ಅನುಗುಣವಾಗಿ ಪ್ರತಿ ಕಡ್ಡಿಯ ಮೇಲೆ ₹2.05ರಿಂದ ₹8.50ವರೆಗೂ ತೆರಿಗೆ ಹೊರ ಬೀಳಲಿದೆ.

ಪಾನ್ ಮಾಸಾಲಾ ಘಟಕಗಳ ತಯಾರಿಕಾ ಸಾಮರ್ಥ್ಯವನ್ನು ಆಧರಿಸಿ ಆರೋಗ್ಯ ಮತ್ತು ರಾಷ್ಟ್ರೀಯ ಸುರಕ್ಷತಾ ಸೆಸ್ ಕಾಯ್ದೆಗಳು ಅನ್ವಯಿಸುತ್ತವೆ. ಇವುಗಳಿಗೆ ಶೇ 40ರಷ್ಟು ಜಿಎಸ್ಟಿ ತೆರಿಗೆ ಅನ್ವಯಿಸಲಿವೆ.

ಹೊಸ ತೆರಿಗೆ ಪದ್ಧತಿಯಲ್ಲಿ 65 ಮಿ.ಮೀ. ಉದ್ದದ ಫಿಲ್ಟರ್ ಇಲ್ಲದ ಸಿಗರೇಟಿನ ಪ್ರತಿ ಕಡ್ಡಿಗೆ ₹2.05ರಷ್ಟು ಹೆಚ್ಚುವರಿ ಸುಂಕ

65 ಮಿ.ಮೀ. ಉದ್ದದ ಸಣ್ಣ ಫಿಲ್ಟರ್ ಹೊಂದಿರುವ ಸಿಗರೇಟು ಕಡ್ಡಿ ಮೇಲೆ ₹2.10ರಷ್ಟು ಹೆಚ್ಚುವರಿ ಸುಂಕ

ಮಧ್ಯಮ ಗಾತ್ರದ ಸಿಗರೇಟು ಅಂದರೆ 65ರಿಂದ 70 ಮಿ.ಮೀ. ಉದ್ದದ ಸಿಗರೇಟುಗಳ ಮೇಲೆ ಪ್ರತಿ ಕಡ್ಡಿಗೆ ₹3.6ರಿಂದ ₹4ರಷ್ಟು ಹಾಗೂ ಉದ್ದನೆಯ ಪ್ರೀಮಿಯಂ ಸಿಗರೇಟು (70ರಿಂದ 75 ಮಿ.ಮೀ) ಉದ್ದ ಕಡ್ಡಿಯ ಮೇಲೆ ₹5.4ರಷ್ಟು ತೆರಿಗೆ ವಿಧಿಸಲಾಗಿದೆ.

ಪ್ರಮಾಣಿತವಲ್ಲದ ವಿನ್ಯಾಸದ ಮತ್ತು ಅಸಮಾನ್ಯ ಸಿಗರೇಟು ಕಡ್ಡಿಗಳ ಮೇಲೆ ಪ್ರತಿ ಕಡ್ಡಿಗೆ ₹8.50ರಷ್ಟು ತೆರಿಗೆ ಹಾಗೂ ಅತ್ಯಂತ ಜನಪ್ರಿಯ ಬ್ರಾಂಡ್ನ ಸಿಗರೇಟುಗಳು ಈ ಸ್ಲಾಬ್ನಡಿ ಬರುವುದಿಲ್ಲ ಎಂದೆನ್ನಲಾಗಿದೆ.

ಹೆಚ್ಚುವರಿ ಅಬಕಾರಿ ಸುಂಕ ಹೇರಿಕೆಯಿಂದ ಸಿಗರೇಟು ಉದ್ಯಮವು ಮುಂದಿನ ಆರ್ಥಿಕ ವರ್ಷದಲ್ಲಿ ಶೇ 6ರಿಂದ 8ರಷ್ಟು ಕುಸಿತ ದಾಖಲಿಸಲಿದೆ ಎಂದು ಅಂದಾಜಿಸಿ ಕ್ರಿಸಿಲ್ ರೇಟಿಂಗ್ಸ್ ವರದಿ ಮಾಡಿದೆ.

ಅಗಿಯುವ ಜರ್ದಾ ಮತ್ತು ಸುವಾಸನೆ ಭರಿತ ತಂಬಾಕು ಹಾಗೂ ಗುಟ್ಕಾ ಮೇಲೆ ಕ್ರಮವಾಗಿ ಶೇ 82 ಹಾಗೂ ಶೇ 91ರಷ್ಟು ಅಬಕಾರಿ ಸುಂಕ ಬೀಳಲಿದೆ.

ಸಿಗರೇಟ್, ಪಾನ್ ಮಸಾಲಾ ತೆರಿಗೆ ರಾಜ್ಯದೊಂದಿಗೆ ಹಂಚಿಕೆ

ತಂಬಾಕು ಉತ್ಪನ್ನಗಳಿಂದ ಸಂಗ್ರಹವಾಗುವ ಅಬಕಾರಿ ಸುಂಕವನ್ನು ಹಣಕಾಸು ಆಯೋಗದ ಶಿಫಾರಸ್ಸು ಆಧರಿಸಿ ರಾಜ್ಯಗಳಿಗೆ ಮರು ಹಂಚಿಕೆ ಮಾಡಲಾಗುತ್ತದೆ. ಕೇಂದ್ರವು ತನ್ನ ತೆರಿಗೆ ಪಾಲನ್ನು ವಿಭಜಿಸುವ ಹಾಗೂ ಅದರಲ್ಲಿ ರಾಜ್ಯಗಳಿಗೆ ಶೇ 41ರಷ್ಟು ಹಂಚಿಕೆ ಮಾಡುವ ವಿಧಾನ ಹೊಂದಿದೆ.

ಪಾನ್ ಮಸಾಲಾ ಮಾರಾಟದಿಂದ ಸಂಗ್ರಹವಾಗುವ ತೆರಿಗೆ ಹಣವನ್ನು ಆರೋಗ್ಯ ಜಾಗೃತಿ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.

ಜಗತ್ತಿನಲ್ಲಿ ಭಾರತದಲ್ಲೇ ಕಡಿಮೆ ತೆರಿಗೆ

2017ರಲ್ಲಿ ಜಿಎಸ್ಟಿ ಜಾರಿಗೆ ಬಂದಿತು. ಆದರೆ ಕಳೆದ ಏಳು ವರ್ಷಗಳಿಂದ ಸಿಗರೇಟು ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳು ಆಗಿರಲಿಲ್ಲ. ವಿಶ್ವ ಬ್ಯಾಂಕ್ನ ಅಂದಾಜಿನ ಪ್ರಕಾರ ಸಿಗರೇಟಿನ ಮೇಲೆ ವಿಧಿಸಲಾಗುತ್ತಿರುವ ತೆರಿಗೆಯ ಪ್ರಮಾಣವು ಶೇ 53ರಷ್ಟಿದ್ದು, ಇದು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿಗಿಂತ (ಶೇ 75ಕ್ಕಿಂತ ಅಧಿಕ) ಕಡಿಮೆ ಎಂದಿದೆ.

ಬ್ರಿಟನ್ ಮತ್ತು ಆಸ್ಟ್ರೇಲಿಯಾದಲ್ಲಿ ಸಿಗರೇಟು ಮೇಲೆ ಶೇ 80ರಿಂದ ಶೇ 85ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಫ್ರಾನ್ಸ್, ನ್ಯೂಜಿಲೆಂಡ್ ಮತ್ತು ಐರೋಪ್ಯ ಒಕ್ಕೂಟದ ಇತರ ರಾಷ್ಟ್ರಗಳಲ್ಲಿ ಶೇ 75ರಿಂದ ಶೇ 80ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಮಧ್ಯಮ ಆದಾಯದ ರಾಷ್ಟ್ರಗಳಾದ ಟರ್ಕಿ, ದಕ್ಷಿಣ ಆಫ್ರಿಕಾ, ಫಿಲಿಪಿನ್ಸ್ ಮತ್ತು ಚಿಲಿಯಲ್ಲಿ ಕಳೆದ ಒಂದು ದಶಕದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸನ್ನೂ ಮೀರಿ ತೆರಿಗೆ ವಿಧಿಸಲಾಗುತ್ತಿದೆ.

ಭಾರತದಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾವಕ್ಕೆ ಕಳೆದ ಡಿಸೆಂಬರ್ನಲ್ಲಿ ಸಂಪುಟದ ಅನುಮೋದನೆ ದೊರೆಯಿತು. 2025ರ ಸೆಪ್ಟೆಂಬರ್ನಲ್ಲಿ ಇದಕ್ಕೊಂದು ವ್ಯವಸ್ಥೆಯನ್ನು ರೂಪಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.