ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂಡಿ ಹುದ್ದೆ ವಿಭಜನೆ ಗಡುವು ವಿಸ್ತರಣೆ

Last Updated 13 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ :ಕಂಪನಿಗಳಲ್ಲಿ ಇರುವ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಹುದ್ದೆಯನ್ನು ವಿಭಜನೆ ಮಾಡಲು ವಿಧಿಸಿದ್ದ ಗಡುವನ್ನು 2022ರ ಏಪ್ರಿಲ್‌ವರೆಗೂ ವಿಸ್ತರಿಸಲಾಗಿದೆ.

ಸಿಎಂಡಿಹುದ್ದೆ ವಿಭಜಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಈ ಹಿಂದೆ 2020ರ ಏಪ್ರಿಲ್‌ 1ರ ಗಡುವು ನೀಡಲಾಗಿತ್ತು. ಅದನ್ನು ಎರಡು ವರ್ಷಗಳವರೆಗೆ ಮುಂದೂಡಲಾಗಿದೆ.

ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಹುದ್ದೆ ವಿಭಜನೆಯಿಂದ ಕಂಪನಿಗೆ ಹೊರೆಯಾಗಲಿದೆ. ಹೀಗಾಗಿ ಮುಂದೂಡುವಂತೆ ಕಂಪನಿಗಳು ಬೇಡಿಕೆ ಇಟ್ಟಿದ್ದವು.

ಕಾರ್ಪೊರೇಟ್‌ ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸಿಎಂಡಿ ಹುದ್ದೆ ವಿಭಜನೆಯೂ ಸೇರಿದಂತೆಉದಯ್‌ ಕೋಟಕ್‌ ಸಮಿತಿ ಮಾಡಿದ್ದ ಒಟ್ಟು 80 ಶಿಫಾರಸುಗಳಲ್ಲಿ 40ನ್ನು ಸೆಬಿ ಒಪ್ಪಿಕೊಂಡಿದೆ. ಅದರಂತೆ ಈ ಬದಲಾವಣೆಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಬಹಳಷ್ಟು ಕಂಪನಿಗಳಲ್ಲಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಎರಡೂ ಹುದ್ದೆಯನ್ನು ಒಬ್ಬರೇ ನಿರ್ವಹಿಸುತ್ತಿದ್ದಾರೆ. ಇದರಿಂದ ಹಿತಾಸಕ್ತಿ ಸಂಘರ್ಷ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಹುದ್ದೆ ವಿಭಜನೆಗೆ ನಿರ್ಧರಿಸಲಾಗಿದೆ ಎಂದು ಹೇಳಿದೆ.

ರಿಲಯನ್ಸ್‌ ಇಂಡಸ್ಟ್ರೀಸ್, ಬಿಪಿಸಿಎಲ್‌, ಒಎನ್‌ಜಿಸಿ, ಕೋಲ್‌ ಇಂಡಿಯಾ, ವಿಪ್ರೊ ಮತ್ತು ಹೀರೊಮೋಟೊಕಾರ್ಪ್‌ನಲ್ಲಿ ಒಬ್ಬರೇ ಎರಡು ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

ಅಂಕಿ–ಅಂಶ

500 -ನೋಂದಾಯಿತ ಪ್ರಮುಖ ಕಂಪನಿಗಳು

50% -ಪ್ರಮುಖ 500 ಕಂಪನಿಗಳಲ್ಲಿ ಸಿಎಂಡಿ ಹುದ್ದೆ ವಿಭಜಿಸಿರುವ ಕಂಪನಿಗಳ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT