ಕಲ್‌ರಾಕ್, ಜಲನ್‌ಗೆ ಜೆಟ್ ಏರ್‌ನತ್ತ ಆಸಕ್ತಿ

ಮುಂಬೈ: ಜೆಟ್ ಏರ್‌ವೇಸ್ ಕಂಪನಿಯ ಸಾಲಗಳನ್ನು ತೀರಿಸುವ ವಿಚಾರವಾಗಿ ಬ್ರಿಟನ್ನಿನ ಕಲ್‌ರಾಕ್ ಕ್ಯಾಪಿಟಲ್ ಮತ್ತು ಯುಎಇ ಉದ್ಯಮಿ ಮುರಾರಿ ಲಾಲ್ ಜಲನ್ ಅವರು ಒಟ್ಟಾಗಿ ಸಲ್ಲಿಸಿರುವ ಪ್ರಸ್ತಾವನೆ
ಯನ್ನು ಸಾಲಗಾರರ ಸಮಿತಿ ಶನಿವಾರ ಒಪ್ಪಿಕೊಂಡಿದೆ.
ಈ ಪ್ರಸ್ತಾವನೆ ಬಗ್ಗೆ ಇ–ಮತದಾನ ಪೂರ್ಣಗೊಂಡ ನಂತರ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು.
ಜೆಟ್ ಏರ್‌ವೇಸ್ ಕಂಪನಿಯಲ್ಲಿ ಆಸಕ್ತಿ ವ್ಯಕ್ತಪಡಿಸಿ ಎರಡು ಒಕ್ಕೂಟಗಳು ಬಿಡ್ ಸಲ್ಲಿಸಿದ್ದವು. ಕಲ್‌ರಾಕ್ ಕ್ಯಾಪಿಟಲ್ ಮತ್ತು ಮುರಾರಿ ಲಾಲ್ ಜಲನ್ ಅವರ ಒಕ್ಕೂಟ ಅವುಗಳಲ್ಲಿ ಒಂದು. ಹರಿಯಾಣ ಮೂಲದ ಫ್ಲೈಟ್ ಸಿಮ್ಯುಲೇಷನ್ ಟೆಕ್ನಿಕ್ ಸೆಂಟರ್, ಮುಂಬೈನ ಬಿಗ್ ಚಾರ್ಟರ್ ಮತ್ತು ಅಬುಧಾಬಿಯ ಇಂಪೀರಿಯಲ್ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ಸ್‌ನ ಒಕ್ಕೂಟ ಇನ್ನೊಂದು. ಜೆಟ್ ಏರ್‌ವೇಸ್ ಕಂಪನಿಯು 2019ರ ಏಪ್ರಿಲ್‌ನಿಂದ ಎಲ್ಲ ಬಗೆಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.
ಕಂಪನಿಯು ವಿವಿಧ ಬ್ಯಾಂಕುಗಳಿಗೆ ₹ 8 ಸಾವಿರಕ್ಕಿಂತ ಹೆಚ್ಚಿನ ಸಾಲವನ್ನು ಮರುಪಾವತಿಸಬೇಕಿದೆ. ಕಂಪನಿಗೆ ನೀಡಿದ ಸಾಲದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕೊಟ್ಟಿರುವ ಸಾಲದ ಮೊತ್ತ ಹೆಚ್ಚಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.