ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ ಕಾಮರ್ಸ್ ಸಂಸ್ಥೆಗಳು ದೇಶದ ಕಾನೂನನ್ನು ಸರಿಯಾಗಿ ಪಾಲಿಸುತ್ತಿಲ್ಲ: ಪಿಯೂಷ್ ಗೋಯಲ್

Last Updated 27 ಜೂನ್ 2021, 5:06 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕಾನೂನು ಮತ್ತು ನಿಯಮಗಳನ್ನು ಇ ಕಾಮರ್ಸ್ ಸಂಸ್ಥೆಗಳು ಸರಿಯಾಗಿ ಪಾಲಿಸುತ್ತಿಲ್ಲ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಪ್ರಮುಖವಾಗಿ ವಿದೇಶಿ ಮೂಲದ ದೈತ್ಯ ಇ ಕಾಮರ್ಸ್ ಸಂಸ್ಥೆಗಳು, ಗ್ರಾಹಕರ ಹಿತದೃಷ್ಟಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಅದಕ್ಕಾಗಿ ಸರ್ಕಾರ ಇ ಕಾಮರ್ಸ್ ಮತ್ತು ಮಾರ್ಕೆಟ್‌ಪ್ಲೇಸ್ ನಿಯಂತ್ರಣಕ್ಕೆ ಸೂಕ್ತ ನಿಯಮ ಜಾರಿಗೆ ಮುಂದಾಗಿದೆ ಎಂದು ಸಚಿವ ಗೋಯಲ್ ಹೇಳಿದ್ದಾರೆ.

ವೆಬಿನಾರ್ ಒಂದರಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ದೇಶದ ಮಾರುಕಟ್ಟೆ ದೊಡ್ಡದಾಗಿದ್ದು, ಇಲ್ಲಿ ಎಲ್ಲರನ್ನೂ ಸ್ವಾಗತಿಸುತ್ತೇವೆ. ಆದರೆ ನೆಲದ ಕಾನೂನು ಮತ್ತು ನಿಯಮಗಳು ಎಲ್ಲರಿಗೂ ಅನ್ವಯವಾಗುತ್ತವೆ. ಅವುಗಳನ್ನು ಪಾಲಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.

ಆದರೆ ಕೆಲವೊಂದು ದೊಡ್ಡ ಮಟ್ಟಿನ ಇ ಕಾಮರ್ಸ್ ಸಂಸ್ಥೆಗಳು ದೇಶದಲ್ಲಿ ವ್ಯವಹಾರ ಆರಂಭಿಸುತ್ತವೆ. ಅದಕ್ಕೆ ಹಣ ಮತ್ತು ತೋಳ್ಬಲ ಬಳಕೆ ಮಾಡುವುದು ಸೂಕ್ತವಲ್ಲ, ಬದಲಾಗಿ ಕಾನೂನು ಸರಿಯಾಗಿ ಪಾಲಿಸಬೇಕು ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT