ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ₹ 35 ಸಾವಿರ ಕೋಟಿ ಶೀಘ್ರ

Last Updated 9 ಫೆಬ್ರುವರಿ 2020, 17:21 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ಸರ್ಕಾರಗಳಿಗೆ ₹ 35 ಸಾವಿರ ಕೋಟಿ ಜಿಎಸ್‌ಟಿ ಪರಿಹಾರದ ಮೊತ್ತವನ್ನು ಕೇಂದ್ರ ಸರ್ಕಾರ ಶೀಘ್ರವೇ ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್‌–ನವೆಂಬರ್‌ ಅವಧಿಗೆ ಪರಿಹಾರ ಮೊತ್ತವನ್ನು ಎರಡು ಕಂತಿನಲ್ಲಿ ನೀಡಲಾಗುವುದು ಎಂದು ಹೇಳಿದ್ದಾರೆ.

2017–18 ಮತ್ತು 2018–19ರಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿದ್ದ ಪರಿಹಾರ ಸೆಸ್‌ ಅನ್ನು ಕನ್ಸಾಲಿಡೇಟೆಡ್‌ ಫಂಡ್‌ನಲ್ಲಿ (ಸಿಎಫ್‌ಐ) ಠೇವಣಿ ಇಡಲಾಗಿತ್ತು. ಅದನ್ನು ಈಗ ಪರಿಹಾರವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಜಿಎಸ್‌ಟಿ ಜಾರಿಗೊಳಿಸುವುದರಿಂದ ರಾಜ್ಯಗಳಿಗೆ ಆಗುವ ವರಮಾನ ನಷ್ಟವನ್ನು 5 ವರ್ಷಗಳವರೆಗೆ ತುಂಬಿಕೊಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ. 2017–18, 2018–19 ಹಣಕಾಸು ವರ್ಷಕ್ಕೆ ಹಾಗೂ 2019–20ನೇ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಿಗೆ ಪರಿಹಾರ ನೀಡಲಾಗಿದೆ.

ಪರಿಹಾರ ಸೆಸ್ ಸಂಗ್ರಹವು ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಆಗಿದೆ. ಹೀಗಾಗಿ ಆಗಸ್ಟ್‌ನಿಂದ ರಾಜ್ಯಗಳಿಗೆ ನೀಡುವ ಪರಿಹಾರದಲ್ಲಿ ವಿಳಂಬ ಆಗಿದೆ. ಈ ಬಗ್ಗೆ ರಾಜ್ಯಗಳು ಅಸಮಾಧಾನ ಹೊರಹಾಕಿದ್ದರಿಂದ ಆಗಸ್ಟ್‌–ಸೆಪ್ಟೆಂಬರ್‌ ಅವಧಿಗೆ ₹ 35,298 ಕೋಟಿ ನೀಡಲಾಗಿದೆ.

ಪರಿಹಾರ ನೀಡಿಕೆ ವಿವರ (ಕೋಟಿಗಳಲ್ಲಿ)

2017 ಜುಲೈ–2018 ಮಾರ್ಚ್‌; ₹ 48,785

2018 ಏಪ್ರಿಲ್‌–2019 ಮಾರ್ಚ್‌; ₹ 81,141

2019 ಏಪ್ರಿಲ್‌–ಮೇ; ₹ 17,789

2019 ಜೂನ್‌–ಜುಲೈ; ₹ 27,956

2019 ಆಗಸ್ಟ್‌–ಸೆಪ್ಟೆಂಬರ್‌; ₹ 35,298

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT