ಬೆಂಗಳೂರು: ದೇಶದ ನಗರ ಸ್ಥಳೀಯ ಸರ್ಕಾರಗಳಲ್ಲಿ ಹೊಣೆಗಾರಿಕೆ ವ್ಯವಸ್ಥೆ ಬಲಪಡಿಸುವ ಸಂಬಂಧ ಜನಾಗ್ರಹ ಸಂಸ್ಥೆ ಮತ್ತು ಮಹಾ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರ (ಸಿಎಜಿ) ಕಚೇರಿಯು ಐದು ವರ್ಷದ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿವೆ.

ಸಿಎಜಿ ಕೆ. ಸಂಜಯ್ ಮೂರ್ತಿ ಅವರ ಉಪಸ್ಥಿತಿಯಲ್ಲಿ ಡೆಪ್ಯುಟಿ ಸಿಎಜಿ ಸುಬಿರ್ ಮಲ್ಲಿಕ್ ಮತ್ತು ಜನಾಗ್ರಹ ಸಂಸ್ಥೆಯ ಸಿಇಒ ಶ್ರೀಕಾಂತ್ ವಿಶ್ವನಾಥನ್ ಒಪ್ಪಂದಕ್ಕೆ ಅಂಕಿತ ಹಾಕಿದರು.

ಸ್ಥಳೀಯ ಸರ್ಕಾರಗಳು ಹಣಕಾಸು ನಿರ್ವಹಣೆ ಮತ್ತು ನಾಗರಿಕರಿಗೆ ಸಮರ್ಪಕ ಸೇವೆ ಒದಗಿಸುವಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿವೆ. ಈ ಸಮಸ್ಯೆ ಬಗೆಹರಿಸಲು ಒಪ್ಪಂದ ಸಹಕಾರಿಯಾಗಲಿದೆ ಎಂದು ಜನಾಗ್ರಹ ಸಂಸ್ಥೆ ತಿಳಿಸಿದೆ.

ರಾಷ್ಟ್ರೀಯ ಪುರಸಭೆ ಖಾತೆಗಳ ಕೈಪಿಡಿ ಮತ್ತು ಹಣಕಾಸು ವರದಿಯ ಗುಣಮಟ್ಟ ಸುಧಾರಣೆಗೆ ಒತ್ತು ನೀಡಲಾಗುವುದು. ಬ್ಯಾಂಕ್ಗಳು ಮತ್ತು ಹೂಡಿಕೆದಾರರಿಂದ ಹಣಕಾಸಿನ ಬಗ್ಗೆ ಸರ್ಕಾರಗಳಿಗೆ ಮಾಹಿತಿ ಒದಗಿಸಲಾಗುವುದು. ಸ್ಥಳೀಯ ಸರ್ಕಾರಗಳ ಸಾಲ ಪಡೆಯುವಿಕೆ ಮತ್ತು ನಾಗರಿಕರಿಗೆ ಪಾರದರ್ಶಕವಾಗಿ ಸೌಲಭ್ಯ ಕಲ್ಪಿಸುವ ಬಗ್ಗೆ ಒತ್ತು ನೀಡಲಾಗುವುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.