ಬುಧವಾರ, ಮೇ 12, 2021
25 °C

ಚಿಲ್ಲರೆ ಹಣದುಬ್ಬರ ಮೂರು ವರ್ಷಗಳ ಗರಿಷ್ಠ; ಶೇ 7.35ಕ್ಕೆ ಏರಿಕೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ತರಕಾರಿ ಅಂಗಡಿ – ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರೀಯ ಸಾಂಖ್ಯಿಕ ಕಚೇರಿ ಸೋಮವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ಚಿಲ್ಲರೆ ಹಣದುಬ್ಬರ 2019ರ ಡಿಸೆಂಬರ್‌ನಲ್ಲಿ ಶೇ 7.35ಕ್ಕೆ ಏರಿಕೆಯಾಗಿದೆ. 

ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರವು ಮೂರು ವರ್ಷಗಳ ಗರಿಷ್ಟ ಮಟ್ಟ ತಲುಪಿದೆ. ಈ ಹಿಂದೆ 2016ರ ಜುಲೈನಲ್ಲಿ ಶೇ 6.07 ಗರಿಷ್ಠ ಮಟ್ಟ ದಾಖಲಾಗಿತ್ತು. 2019ರ ನವೆಂಬರ್‌ನಲ್ಲಿ ಶೇ 5.54ರಷ್ಟಿತ್ತು. 

ದೇಶದ ಆರ್ಥಿಕತೆಯು ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವುದನ್ನು ಚಿಲ್ಲರೆ ಹಣದುಬ್ಬರ ಅಂಕಿ–ಅಂಶಗಳು ಮತ್ತೆ ಸ್ಪಷ್ಟಪಡಿಸಿವೆ. ಸರ್ಕಾರದ ಅಂಕಿ–ಅಂಶಗಳ ಪ್ರಕಾರ, 2019ರ ನವೆಂಬರ್‌ನಲ್ಲಿ ಶೇ 10.01ರಷ್ಟಿದ್ದ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಡಿಸೆಂಬರ್‌ನಲ್ಲಿ ಶೇ 14.12ರಷ್ಟಾಗಿದೆ. 2018ರ ಡಿಸೆಂಬರ್‌ನಲ್ಲಿ ಆಹಾರ ಉತ್ಪನ್ನಗಳ ಬೆಲೆ ಶೇ (–) 2.65 ರಷ್ಟಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು