ನವದೆಹಲಿ: ಮೂರು ತಿಂಗಳೊಳಗೆ ವೇದಿಕೆಯಲ್ಲಿನ ‘ಡಾರ್ಕ್ ಪ್ಯಾಟರ್ನ್ಸ್’ಗಳನ್ನು ಗುರುತಿಸಿ, ತೆಗೆದು ಹಾಕುವಂತೆ ಇ–ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ನಿರ್ದೇಶನ ನೀಡಿದೆ.

ಎಲ್ಲ ಇ–ಕಾಮರ್ಸ್ ವೇದಿಕೆಗಳು ಕಡ್ಡಾಯವಾಗಿ ಮೂರು ತಿಂಗಳೊಳಗೆ ಸ್ವಯಂ ಪರಿಶೋಧನೆ ನಡೆಸಿ, ಡಾರ್ಕ್ ಪ್ಯಾಟರ್ನ್ಸ್ಗಳನ್ನು ಪತ್ತೆ ಹಚ್ಚಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ ವೇದಿಕೆಯನ್ನು ಇವುಗಳಿಂದ ಮುಕ್ತಗೊಳಿಸಬೇಕು. ಡಾರ್ಕ್ ಪ್ಯಾಟರ್ನ್ಸ್ಗಳಿಂದ ವೇದಿಕೆ ಮುಕ್ತವಾಗಿದೆ ಎಂದು ಕಂಪನಿಗಳು ಸ್ವಯಂ ಘೋಷಿಸಬೇಕು ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯವು ಶನಿವಾರ ತಿಳಿಸಿದೆ.

ಈ ಘೋಷಣೆಯು ಗ್ರಾಹಕರಲ್ಲಿ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ನ್ಯಾಯೋಚಿತ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದೆ.

ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುವುದು, ತುರ್ತಾಗಿ ಪ್ರತಿಕ್ರಿಯಿಸುವಂತೆ ‘ಅಲರ್ಟ್’ಗಳನ್ನು ರವಾನಿಸಿ, ಅನಿವಾರ್ಯತೆ ಸೃಷ್ಟಿಸುವುದು, ಚಂದಾದಾರರಾಗುವಂತೆ ಪ್ರಚೋದಿಸುವುದು, ಆರಂಭದಲ್ಲಿ ವಸ್ತುಗಳ ದರ ಕಡಿಮೆ ಇರುವಂತೆ ತೋರಿಸಿ ನಂತರ ಹೆಚ್ಚುವರಿ ವೆಚ್ಚಗಳನ್ನು ಸೇರಿಸಿ ಕೊನೆಯಲ್ಲಿ ಹೆಚ್ಚಿನ ದರ ವಸೂಲಿ ಮಾಡುವಂತಹ ಪರಿಪಾಟಗಳನ್ನು ಕೆಲ ಇ–ಕಾಮರ್ಸ್ ಕಂಪನಿಗಳು ಅನುಸರಿಸುತ್ತವೆ. ಇದನ್ನು ‘ಡಾರ್ಕ್ ಪ್ಯಾಟರ್ನ್ಸ್’ ಎನ್ನಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.