ಭಾನುವಾರ, ಜುಲೈ 25, 2021
21 °C

ಲಾಕ್‌ಡೌನ್‌ ಹಿನ್ನೆಲೆ: ಪಾವತಿಗೆ ಮೊಬೈಲ್‌ ಆ್ಯಪ್‌ ಬಳಕೆಯೇ ಹೆಚ್ಚು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮೊಬೈಲ್ ಆ್ಯಪ್‌ ಆಧಾರಿತ ಪಾವತಿಯು 2019ರಲ್ಲಿ ಶೇ 163ರಷ್ಟು ಜಿಗಿತ ಕಂಡಿದ್ದು, ವಹಿವಾಟು ₹ 21.52 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟಲಿಜೆನ್ಸ್‌ ತಿಳಿಸಿದೆ.

ಆನ್‌ಲೈನ್‌, ಆ್ಯಪ್‌, ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ಪಾಯಿಂಟ್‌ ಆಫ್‌ ಸೇಲ್‌ ವರ್ಗಾವಣೆ ಮಾಡುತ್ತಿರುವುದು ಶೇ 24ರಷ್ಟು ಹೆಚ್ಚಾಗಿದೆ ಎಂದು ಇಂಡಿಯನ್‌ ಮೊಬೈಲ್‌ ಪೇಮೆಂಟ್ಸ್‌‌ ಮಾರ್ಕೆಟ್‌ ರಿಪೋರ್ಟ್‌ ತಿಳಿಸಿದೆ.

ಕಾರ್ಡ್‌ ಮತ್ತು ಮೊಬೈಲ್‌ ಪಾವತಿಗೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಎಟಿಎಂನಿಂದ ಹಣ ಪಡೆಯುವುದು ಇಳಿಕೆಯಾಗಿದೆ. 

‘ಇತ್ತೀಚಿನ ವರ್ಷಗಳಲ್ಲಿ ನಗದು ರಹಿತ ಪಾವತಿಯು ಗರಿಷ್ಠ ಪ್ರಗತಿ ಕಾಣುತ್ತಿದ್ದು, ಆರ್ಥಿಕ ಮಂದಗತಿ ಮತ್ತು ಕೋವಿಡ್‌ ಬಿಕ್ಕಟ್ಟಿನಿಂದಾಗಿ ಇದು ಇನ್ನೂ ಹೆಚ್ಚಿನ ಬೆಳವಣಿಗೆ ಕಾಣುವ ನಿರೀಕ್ಷೆ ಮಾಡಲಾಗುತ್ತಿದೆ’ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟಲಿಜೆನ್ಸ್‌ನ ವಿಶ್ಲೇಷಕ ಸಂಪತ್‌ ಶರ್ಮಾ ತಿಳಿಸಿದ್ದಾರೆ.

ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಯಮ ಜಾರಿಯಲ್ಲಿ ಇರುವುದರಿಂದ ಕಾರ್ಡ್‌ ಪಾವತಿಗಿಂತಲೂ ಮೊಬೈಲ್‌ ಮೂಲಕ ಪಾವತಿಯು ಹೆಚ್ಚು ಏರಿಕೆ ಕಾಣುವ ನಿರೀಕ್ಷೆ ಇದೆ ಎಂದೂ ಹೇಳಿದ್ದಾರೆ.

***

ಯಾವುದಕ್ಕೆಲ್ಲಾ ಬಳಕೆ

ಬ್ಯಾಂಕ್‌ ಖಾತೆಯಿಂದ ಖಾತೆಗೆ

ಮೊಬೈಲ್‌ ರೀಚಾರ್ಜ್‌

ವಿದ್ಯುತ್‌, ನೀರು ಬಿಲ್‌ ಪಾವತಿಗೆ

ದಿನಸಿ ಖರೀದಿಗೆ

***

ಪ್ರಮುಖ ಆ್ಯಪ್‌ಗಳು

ಯುಪಿಐ

ಗೂಗಲ್‌ ಪೇ

ಫೋನ್‌ಪೇ

ಪೇಟಿಎಂ

***

ಅಂಕಿ–ಅಂಶ

ಮೊಬೈಲ್‌ ಪಾವತಿ

20%

2019ರ ಡಿಸೆಂಬರ್‌ 31ಕ್ಕೆ ಆಗಿರುವ ಏರಿಕೆ

13%

2018ರ ಡಿಸೆಂಬರ್‌ 31ರಲ್ಲಿ ಆಗಿದ್ದ ಏರಿಕೆ

21%

ಕಾರ್ಡ್‌ ಮತ್ತು ಮೊಬೈಲ್‌ ಪಾವತಿಯಲ್ಲಿ ಆಗಲಿರುವ ಏರಿಕೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು