ಮಂಗಳವಾರ, ಮೇ 26, 2020
27 °C

ಲಾಕ್‌ಡೌನ್‌: ಆರೋಗ್ಯ, ವಾಹನ ವಿಮೆ ಪ್ರೀಮಿಯಂ ಪಾವತಿಗೆ ಏಪ್ರಿಲ್ 21ರವರೆಗೂ ಅವಕಾಶ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಿಮೆ ಪ್ರೀಮಿಯಂ ಪಾವತಿ

ನವದೆಹಲಿ: ಲಾಕ್‌ಡೌನ್‌ ಅವಧಿಯಲ್ಲಿ ಆರೋಗ್ಯ ವಿಮೆ ಮತ್ತು ಮೋಟಾರ್ ವಾಹನ ವಿಮೆಗಳ ಪ್ರೀಮಿಯಂ ಪಾವತಿ ಅವಧಿ ಏಪ್ರಿಲ್‌ 21ರ ವರೆಗೂ ವಿಸ್ತರಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ತಿಳಿಸಿದ್ದಾರೆ.

'ಕೋವಿಡ್‌–19 ಬಿಕ್ಕಟ್ಟಿನ ಸಮಯದಲ್ಲಿ ಥರ್ಡ್‌ ಪಾರ್ಟಿ ಮೋಟಾರ್ ವಾಹನ ವಿಮೆ ಪಾಲಿಸಿ ಹಾಗೂ ಆರೋಗ್ಯ ವಿಮೆ ಪಾಲಿಸಿದಾರರಿಗೆ ಸರ್ಕಾರ ಕಾಲಾವಕಾಶ ನೀಡಿದೆ' ಎಂದು ನಿರ್ಮಲಾ ಸೀತಾರಾಮನ್‌ ಟ್ವೀಟಿಸಿದ್ದಾರೆ. 

ಮಾರ್ಚ್‌ 25ರಿಂದ ಏಪ್ರಿಲ್‌ 14ರ ವರೆಗೂ ಪಾವತಿಯಾಗಬೇಕಾದ ಯಾವುದೇ ಆರೋಗ್ಯ ಹಾಗೂ ಆಟೊ ವಿಮೆ ಪಾಲಿಸಿ ಸ್ಥಗಿತಗೊಳ್ಳುವುದಿಲ್ಲ. ಪಾಲಿಸಿದಾರರು ಲಾಕ್‌ಡೌನ್‌ ಅವಧಿಯಲ್ಲಿ ಪ್ರೀಮಿಯಂ ಪಾವತಿಸಲು ಸಾಧ್ಯವಾಗದಿದ್ದರೆ, ಪಾಲಿಸಿ ಕಳೆದುಕೊಳ್ಳುವ ಆತಂಕ ಪಡಬೇಕಿಲ್ಲ. ಏಪ್ರಿಲ್‌ 21ರ ವರೆಗೂ ಪಾವತಿಗೆ ಅವಕಾಶ ನೀಡಿಲಾಗಿದ್ದು, ಈ ಕುರಿತು ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯದ ವಕ್ತಾರರು ಹೇಳಿದ್ದಾರೆ. 

ಪ್ರೀಮಿಯಂ ಪಾವತಿಯಾಗದೆ ಪಾಲಿಸಿದಾರರಿಗೆ ವಿಮೆ ಅನ್ವಯವಾಗುವುದಿಲ್ಲ ಎಂಬ ಅಂಶವು ವಿಮಾ ಕಾಯ್ದೆ,1939ರ ಸೆಕ್ಷನ್‌ 64ವಿಬಿ ಒಳಗೊಂಡಿದೆ. ಸರ್ಕಾರ ಅದಕ್ಕೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿದೆ. 

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಹಾಗೂ ಪಾನ್‌–ಆಧಾರ್‌ ಸಂಪರ್ಕಿಸುವ ಅವಧಿಯನ್ನು ಜೂನ್‌ 30ರ ವರೆಗೂ ವಿಸ್ತರಿಸಿರುವುದನ್ನು ನಿರ್ಮಲಾ ಸೀತಾರಾಮನ್‌ ಇತ್ತೀಚೆಗಷ್ಟೇ ಪ್ರಕಟಿಸಿದರು. ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ ಅವಕಾಶವನ್ನೂ ಜೂನ್‌ 30ರ ವರೆಗೂ ವಿಸ್ತರಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು