ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಷನ್‌ ಬ್ಯಾಂಕ್‌ ₹ 130 ಕೋಟಿ ಲಾಭ

Last Updated 6 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಮಂಗಳೂರು: ಪ್ರಸಕ್ತ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ ಕಾರ್ಪೊರೇಷನ್‌ ಬ್ಯಾಂಕ್‌ ಒಟ್ಟು ₹ 130 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿನ ₹103 ಕೋಟಿ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 27 ರಷ್ಟು ಪ್ರಗತಿಯಾಗಿದೆ.

ಒಟ್ಟಾರೆ ₹ 3,12,145 ಕೋಟಿ ವಹಿವಾಟು ನಡೆಸಲಾಗಿದೆ. ₹ 1,91,293 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ಶೇ 9.29 ರಷ್ಟು ವೃದ್ಧಿಯಾಗಿದೆ. ₹ 1,20,852 ಕೋಟಿ ಸಾಲ ವಿತರಿಸಿದ್ದು, ಶೇ 4.01 ರಷ್ಟು ಪ್ರಗತಿ ಸಾಧಿಸಲಾಗಿದೆ.

ಚಾಲ್ತಿ ಮತ್ತು ಉಳಿತಾಯ ಖಾತೆ ಠೇವಣಿಯು ₹ 54,484 ಕೋಟಿಗಳಷ್ಟಿದೆ. ಮೊದಲ ತ್ರೈಮಾಸಿಕದಲ್ಲಿ ಶೇ 5.69 ರಷ್ಟಿದ್ದ ನಿವ್ವಳ ಎನ್‌ಪಿಎ, ಎರಡನೇ ತ್ರೈಮಾಸಿಕದಲ್ಲಿ ಶೇ 5.59ಕ್ಕೆ ಇಳಿದಿದೆ. ನಿರ್ವಹಣಾ ಲಾಭದಲ್ಲೂ ಏರಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ₹ 899 ಕೋಟಿಯಾಗಿದ್ದ ನಿರ್ವಹಣಾ ಲಾಭ, ಈ ಬಾರಿ ₹1,016 ಕೋಟಿಗೆ ಹೆಚ್ಚಿದೆ.

‘ಬ್ಯಾಂಕ್‌ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಹಕರು ಕಾರ್ಪ್‌ ಇಸಿ ಮೂಲಕ ಬ್ರಾಡ್‌ಬ್ಯಾಂಡ್, ಡಿಟಿಎಚ್‌, ವಿದ್ಯುತ್‌, ನೀರು, ಮೊಬೈಲ್‌ ಬಿಲ್‌ಗಳನ್ನು ಪಾವತಿಸಬಹುದಾಗಿದೆ. ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ಗ್ರೀನ್‌ ಪಿನ್‌ ಆರಂಭಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇಂಟರ್‌ನೆಟ್ ಬ್ಯಾಂಕ್‌ ಗ್ರಾಹಕರಿಗೆ ಇ–ಸೇವಾ ವಿಭಾಗದಲ್ಲಿ ಕಾರ್ಪ್‌ ಲೋನ್‌ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಇದರಿಂದ ಗೃಹ ಸಾಲ, ವಾಹನ ಸಾಲ, ವಿದ್ಯಾ ಸಾಲ ಮತ್ತು ಎಂಎಸ್‌ಎಂಇ ಸಾಲಕ್ಕಾಗಿ ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಪಿ.ವಿ. ಭಾರತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT