ಐಎಲ್‌ಆ್ಯಂಡ್‌ಎಫ್‌ಎಸ್‌ ವಂಚನೆಹಲವರ ವಿರುದ್ಧ ಆರೋಪ ಪಟ್ಟಿ

ಬುಧವಾರ, ಜೂನ್ 26, 2019
26 °C
ಗಂಭೀರ ವಂಚನೆ ತನಿಖಾ ಕಚೇರಿ ಕ್ರಮ

ಐಎಲ್‌ಆ್ಯಂಡ್‌ಎಫ್‌ಎಸ್‌ ವಂಚನೆಹಲವರ ವಿರುದ್ಧ ಆರೋಪ ಪಟ್ಟಿ

Published:
Updated:
Prajavani

ನವದೆಹಲಿ (ಪಿಟಿಐ): ದೀರ್ಘಾವಧಿಯ ಮೂಲಸೌಕರ್ಯ ಯೋಜನೆಗಳಿಗೆ ಸಾಲ ನೀಡುವ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ನಲ್ಲಿನ (ಐಎಲ್‌ಆ್ಯಂಡ್‌ಎಫ್‌ಎಸ್‌) ಬಹುಕೋಟಿ ವಂಚನೆ ಪ್ರಕರಣ ಸಂಬಂಧ, ಗಂಭೀರ ಅಪರಾಧ ತನಿಖಾ ಕಚೇರಿಯು (ಎಸ್‌ಎಫ್‌ಐಒ) ಅನೇಕರ ವಿರುದ್ಧ ಮೊದಲ ಆರೋಪ ಪಟ್ಟಿ ಸಲ್ಲಿಸಿದೆ.

ನಿಯಮಗಳನ್ನು ಉಲ್ಲಂಘಿಸಿದ ಮತ್ತು ವಂಚನೆ ಕೃತ್ಯ ಎಸಗಿದ 30 ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಮುಂಬೈನಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಈ ಆರೋಪ ಪಟ್ಟಿ ದಾಖಲಿಸಲಾಗಿದೆ. ಕೆಲ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಐಎಲ್‌ಆ್ಯಂಡ್‌ಎಫ್‌ಎಸ್‌ ಸಮೂಹದ ಹಣಕಾಸು ಸೇವಾ ಅಂಗಸಂಸ್ಥೆಯಾಗಿರುವ ಐಎಲ್ಆ್ಯಂಡ್‌ಎಫ್‌ಎಸ್‌ ಫೈನಾನ್ಶಿಯಲ್‌ ಸರ್ವಿಸಸ್‌ನಲ್ಲಿನ (ಐಎಫ್‌ಐಎನ್‌) ಅನೇಕರು ಲೆಕ್ಕ ತಪಾಸಿಗರು, ಸ್ವತಂತ್ರ ನಿರ್ದೇಶಕರ ಜತೆ ಸೇರಿ ವಂಚಕರ ಕೂಟ ರಚಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ದೂರಲಾಗಿದೆ.

‘ಐಎಫ್‌ಐಎನ್‌’ ಮಾಜಿ ಕಾರ್ಯನಿರ್ವಾಹಕರು ಮತ್ತು ಸ್ವತಂತ್ರ ನಿರ್ದೇಶಕರು ಮತ್ತು ಇತರರ ಚರ ಮತ್ತು ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. 400 ಸಂಸ್ಥೆಗಳ ಖಾತೆಗಳ ಪರಿಶೀಲನೆ, ಕಂಪ್ಯೂಟರ್‌ಗಳಿಂದ ಸಂಗ್ರಹಿಸಿದ ಲೆಕ್ಕಪತ್ರ ಮತ್ತಿತರ ದತ್ತಾಂಶ, ಇ–ಮೇಲ್‌ ಮಾಹಿತಿ, ಆರ್‌ಬಿಐ ತಪಾಸಣಾ ವರದಿ, ಸಭಾ ನಡಾವಳಿ, ಸರ್ಕಾರ ನೇಮಿಸಿದ ಹೊಸ ಮಂಡಳಿಯ ವರದಿ  ಮತ್ತಿತರ ದಾಖಲೆಗಳನ್ನು ಆಧರಿಸಿ ಈ ಆರೋಪ ಪಟ್ಟಿ ದಾಖಲಿಸಲಾಗಿದೆ.

ಕಂಪನಿಯ, ಷೇರುದಾರರ, ಸಾಲಗಾರರ ಹಿತಾಸಕ್ತಿಗೆ ಧಕ್ಕೆ ಒದಗಿಸುವ ದುರುದ್ದೇಶದಿಂದಲೇ ‘ಐಎಫ್‌ಐಎನ್‌’ ಉನ್ನತ ಅಧಿಕಾರಿಗಳು ವಂಚನೆ ಎಸಗಿದ್ದಾರೆ.

ಶಾಸನಬದ್ಧ ಲೆಕ್ಕಪತ್ರ ತಪಾಸಿಗರೂ ಈ ವಂಚನೆಯಲ್ಲಿ ಕೈಜೋಡಿಸಿದ್ದಾರೆ. ಆರೋಪಿಗಳು ತಮ್ಮ ಕೃತ್ಯಗಳನ್ನು ಪುನರಾವರ್ತಿಸಿ ಸಾಲಗಳನ್ನು ವಸೂಲಾಗದ ಸಾಲ ಎಂದು ವರ್ಗೀಕರಿಸಿ ಅಥವಾ ಖಾತೆ ವಜಾ ಮಾಡುತ್ತಿದ್ದರು. ಇದರಿಂದ ಸಂಸ್ಥೆಗೆ ದೊಡ್ಡ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !