ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ, ಚೀನಾವನ್ನು ನಡೆಸಿಕೊಂಡಂತೆ ನಮ್ಮನ್ನೂ ನಡೆಸಿಕೊಳ್ಳಿ: ಟ್ರಂಪ್‌

Last Updated 23 ಜನವರಿ 2020, 2:55 IST
ಅಕ್ಷರ ಗಾತ್ರ

ದಾವೋಸ್‌: ‘ಭಾರತ, ಚೀನಾವನ್ನು ಅಭಿವೃದ್ಧಿ ಶೀಲ ಎಂದು ಪರಿಗಣಿಸಿ ಅಪರಿಮಿತ ಅವಕಾಶ ಕಲ್ಪಿಸಿಕೊಡುವ ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯೂಟಿಒ) ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ,’ ಎಂದು ಅಮೆರಿಕ ಡೊನಾಲ್ಡ್‌ ಟ್ರಂಪ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಡಬ್ಲ್ಯೂಟಿಒ ನಮ್ಮ ದೇಶವನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ. ಹೀಗಾಗಿ ಅದರೊಂದಿಗೆ ನಾನು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇನೆ. ಚೀನಾವನ್ನು ಅಭಿವೃದ್ಧಿ ಶೀಲ ರಾಷ್ಟ್ರವನ್ನಾಗಿ ಡಬ್ಲ್ಯೂಟಿಒ ನೋಡುತ್ತದೆ. ಭಾರತವನ್ನೂ ಅಭಿವೃದ್ಧಿ ಶೀಲ ರಾಷ್ಟ್ರವನ್ನಾಗಿ ನೋಡುತ್ತದೆ. ಆದರೆ ನಮ್ಮನ್ನು ಹಾಗೆ ನೋಡುವುದೇ ಇಲ್ಲ,’ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

‘ಅಭಿವೃದ್ಧಿ ಶೀಲ ರಾಷ್ಟ್ರಗಳು ಎಂಬ ಹೆಸರಿನಲ್ಲಿ ಅವರು (ಭಾರತ ಮತ್ತು ಚೀನಾ) ಅಪರಿಮಿತ ಅನುಕೂಲಗಳನ್ನು ಪಡೆಯುತ್ತಿದ್ದಾರೆ. ನಮಗೆ ಅನುಕೂಲಗಳೇ ಇಲ್ಲವಾಗಿವೆ. ನನ್ನ ಮಟ್ಟಿಗೆ ಅಮೆರಿಕ ಕೂಡ ಅಭಿವೃದ್ಧಿಶೀಲ ರಾಷ್ಟ್ರವೇ? ಅವರಿಗೆ ಅನುಕೂಲಗಳಾಗುವುದಿದ್ದರೆ ನಮಗೂ ಆಗಲಿ. ಇಲ್ಲದಿದ್ದರೆ ಅವರಿಗೂ ಬೇಡ. ಈ ವಿಚಾರದಲ್ಲಿ ಇಡೀ ವ್ಯವಸ್ಥೆಯೇ ಬದಲಾಗಬೇಕು ಎಂದು ನಾನು ಆಗ್ರಹಿಸುತ್ತೇನೆ. ಅಥವಾ ಸಮಸ್ಯೆ ಸರಿಪಡಿಸಬೇಕು,’ ಎಂದು ಟ್ರಂಪ್‌ ಒತ್ತಾಯಿಸಿದ್ದಾರೆ.

ಅಮೆರಿಕ ವಿಚಾರದಲ್ಲಿ ಡಬ್ಲ್ಯೂಟಿಒ ಹಲವು ವರ್ಷಗಳಿಂದಲೂ ತಾರತಮ್ಯ ಅನುಸರಿಸುತ್ತಿದೆ ಎಂದೂ ಟ್ರಂಪ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT