ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಅಡ್ಡ ಪರಿಣಾಮ; ಶೇ.77ರಷ್ಟು ಭಾರತೀಯರು ಆದಾಯ ವಂಚಿತ

Last Updated 4 ಜನವರಿ 2021, 6:12 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಅಡ್ಡ ಪರಿಣಾಮದಿಂದಾಗಿ ಆರ್ಥಿಕವಾಗಿ ಸಕ್ರಿಯರಾಗಿದ್ದ ಶೇಕಡಾ 77ರಷ್ಟು ಭಾರತೀಯರು ಆದಾಯ ವಂಚಿತವಾಗಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

2020 ಸವಾಲಿನ ವರ್ಷವಾಗಿದ್ದು, ಅನೇಕರಿಗೆ ಕೆಟ್ಟ ಅನುಭವಗಳನ್ನು ತಂದೊಡ್ಡಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಜಾಗತಿಕವಾಗಿ ಆರ್ಥಿಕ ಹಿಂಜರಿತ ಎದುರಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಆರೋಗ್ಯ ಬಿಕ್ಕಟ್ಟಿನ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಕೋವಿಡ್-19 ಸಾಂಕ್ರಾಮಿಕ ರೋಗವು ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ವ್ಯವಹಾರವು ಸ್ಥಗಿತ ಅಥವಾ ಕುಂಠಿತಗೊಂಡಿರುವುದರಿಂದ ನಿರುದ್ಯೋಗ ಸಮಸ್ಯೆಗಳು ಹೆಚ್ಚಳವಾಗಿ ಅನೇಕ ಕುಟುಂಬಗಳು ತೊಂದರೆ ಎದುರಿಸಿದವು.

ಭಾರತೀಯ ಮಾರುಕಟ್ಟೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಬೀರಿರುವ ಆರ್ಥಿಕ ಪರಿಣಾಮವನ್ನು ಮನಗಾಣಲು ಲೊಟ್ಟೊ247 ಡಾಟ್ ಕಾಮ್, ನವೆಂಬರ್‌ನಲ್ಲಿ ಸಮೀಕ್ಷೆಯೊಂದನ್ನು ನಡೆಸಿತ್ತು. 1700ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗವಹಿಸಿದ್ದರು. ಅಲ್ಲದೆ ಆರ್ಥಿಕವಾಗಿ ಸಕ್ರಿಯವಾಗಿರುವ ಶೇಕಡಾ 77ರಷ್ಟು ಭಾರತೀಯರು ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ಸಮೀಕ್ಷಾ ವರದಿ ಬಹಿರಂಗಪಡಿಸಿದೆ.

ಸಮೀಕ್ಷಾ ವರದಿಗಳ ಪ್ರಕಾರ 40ರ ಪ್ರಾಯ ಪರಿಧಿ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಸಾಂಕ್ರಾಮಿಕ ರೋಗದ ಪರಿಣಾಮದಿಂದಾಗಿ ಈ ವಿಭಾಗದವರು ಶೇಕಡಾ 80ರಷ್ಟು ಹೆಚ್ಚು ಮಂದಿ ಆದಾಯವನ್ನು ಕಳೆದುಕೊಂಡಿದ್ದಾರೆ. ಹಾಗೆಯೇ 50ರ ಪ್ರಾಯ ಪರಿಧಿಯವರು ಶೇಕಡಾ 73ರಷ್ಟು ಆದಾಯ ಕಳೆದುಕೊಂಡಿದ್ದಾರೆ.

70 ಹಾಗೂ ಅದಕ್ಕಿಂತ ಹೆಚ್ಚಿನ ಪ್ರಾಯ ಪರಿಧಿಯಲ್ಲಿ ಹೆಚ್ಚಿನ ತೊಂದರೆ ಎದುರಾಗಿಲ್ಲ. ಶೇಕಡಾ 30ರಷ್ಟು ಆದಾಯ ಕಳೆದುಕೊಂಡಿದ್ದಾರೆ.

ಸಮೀಕ್ಷೆಯ ಮಗದೊಂದು ಗಮನಾರ್ಹ ಅಂಶವೆಂದರೆ ಮಹಿಳೆಯರಿಗಿಂತಲೂ ಪುರುಷರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಶೇಕಡಾ 78ರಷ್ಟು ಪುರುಷರು ಹಾಗೂ ಶೇಕಡಾ 67ರಷ್ಟು ಮಹಿಳೆಯರು ಆದಾಯ ಕಳೆದುಕೊಂಡಿದ್ದಾರೆ. ವಿವಾದ ವಿಚ್ಛೇದನ ಪಡೆದ ಶೇಕಡಾ 87.5ರಷ್ಟು ಮಂದಿಯ ಮೇಲೂ ಪರಿಣಾಮ ಬೀರಿದೆ ಎಂದು ಸಮೀಕ್ಷೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT