ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೆನ್ನೈ: 500ನೇ ಕ್ರೋಮಾ ಮಳಿಗೆ ಲೋಕಾರ್ಪಣೆ

Published 19 ಜೂನ್ 2024, 14:26 IST
Last Updated 19 ಜೂನ್ 2024, 14:26 IST
ಅಕ್ಷರ ಗಾತ್ರ

ಚೆನ್ನೈ: ಟಾಟಾ ಸಮೂಹದ ಇನ್ಫಿನಿಟಿ ರಿಟೇಲರ್ ‘ಕ್ರೋಮಾ’ದ 500ನೇ ಮಳಿಗೆಯು ಚೆನ್ನೈನ ಕಟ್ಟುಪಾಕ್ಕಂನಲ್ಲಿ ಬುಧವಾರ ಕಾರ್ಯಾರಂಭ ಮಾಡಿದೆ. 

ಹೊಸ ಮಳಿಗೆಯಲ್ಲಿ 550 ಬ್ರ್ಯಾಂಡ್‌ಗಳ 16 ಸಾವಿರಕ್ಕೂ ಹೆಚ್ಚು ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿವೆ. ಮಳಿಗೆ ಉದ್ಘಾಟನೆ ಅಂಗವಾಗಿ ಜೂನ್‌ 23ರ ವರೆಗೆ ಉತ್ಪನ್ನಗಳ ಖರೀದಿ ಮೇಲೆ ಶೇ 10ರಷ್ಟು ರಿಯಾಯಿತಿ ಸೌಲಭ್ಯ ಪ್ರಕಟಿಸಲಾಗಿದೆ. ‘ಹ್ಯಾಪಿ 500 ಟು ಯೂ’ ಅಭಿಯಾನದ ಮೂಲಕ ಉದ್ಘಾಟಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

‘ಈ ಮಳಿಗೆ ಆರಂಭದ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದ್ದೇವೆ. ಅಲ್ಲದೆ, ದೇಶದ ಎಲ್ಲ ಭಾಗಕ್ಕೂ ತಲುಪಿದ್ದೇವೆ. ನಮ್ಮ ಹೆಜ್ಜೆಯನ್ನು ಇನ್ನಷ್ಟು ವಿಸ್ತರಿಸಬೇಕಿದೆ’ ಎಂದು ‘ಕ್ರೋಮಾ’ದ ಡೆಪ್ಯುಟಿ ಸಿಇಒ ಶಿಬಾಶಿಷ್‌ ರಾಯ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT