ಬುಧವಾರ, ಆಗಸ್ಟ್ 17, 2022
23 °C

ಕಚ್ಚಾತೈಲ ಉತ್ಪಾದನೆ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ  ಕಚ್ಚಾತೈಲ, ನೈಸರ್ಗಿಕ ಅನಿಲ ಉತ್ಪಾದನೆ ಕಡಿಮೆ ಮಾಡಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಕಚ್ಚಾ ತೈಲ ಉತ್ಪಾದನೆ ಏಪ್ರಿಲ್‌ನಲ್ಲಿ ಶೇ 6.35ರಷ್ಟು ಇಳಿಕೆ ಆಗಿದ್ದು, 25 ಲಕ್ಷ ಟನ್‌ಗಳಷ್ಟಾಗಿದೆ. ಒಎನ್‌ಜಿಸಿ ಉತ್ಪಾದನೆ 17 ಲಕ್ಷ ಟನ್‌ಗಳಷ್ಟಿದೆ. 

ಲಾಕ್‌ಡೌನ್‌ನಿಂದಾಗಿ ಬಹಳಷ್ಟು ವಾಹನಗಳು ರಸ್ತೆಗಿಳಿಯದೇ ಇರುವುದರಿಂದ ತೈಲ ಸಂಸ್ಕರಣಾಗಾರಗಳು ಏಪ್ರಿಲ್‌ನಲ್ಲಿ ಶೇ 30ರಷ್ಟು ಕಡಿಮೆ ಸಂಸ್ಕರಣೆ ಮಾಡಿವೆ.

ನೈಸರ್ಗಿಕ ಅನಿಲ ಉತ್ಪಾದನೆ ಶೇ 18.6ರಷ್ಟು ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು