ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇಟಾ ಬಳಕೆ: ಚೀನಾ ಮೊಬೈಲ್‌ ಹಿಂದಿಕ್ಕಿದ ರಿಲಯನ್ಸ್‌ ಜಿಯೊ

Published 23 ಏಪ್ರಿಲ್ 2024, 16:03 IST
Last Updated 23 ಏಪ್ರಿಲ್ 2024, 16:03 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ರಿಲಯನ್ಸ್ ಜಿಯೊ ಕಂಪನಿಯು, ಡೇಟಾ ಬಳಕೆಯಲ್ಲಿ ಹೊಸ ಜಾಗತಿಕ ದಾಖಲೆ ಬರೆದಿದೆ.

ರಿಲಯನ್ಸ್ ಜಿಯೊ ಡೇಟಾ ಬಳಕೆಯಲ್ಲಿ ವಿಶ್ವದ ನಂಬರ್ ಒನ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಒಟ್ಟು ಡೇಟಾ ಬಳಕೆಯ 40.9 ಎಕ್ಸಾಬೈಟ್‌ನಷ್ಟು ದಾಖಲಾಗಿದೆ. ಆ ಮೂಲಕ ಡೇಟಾ ಬಳಕೆಯಲ್ಲಿ ಇದುವರೆಗೆ ನಂಬರ್ ಒನ್ ಕಂಪನಿಯಾಗಿದ್ದ ಚೀನಾದ ಮೊಬೈಲ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಅದರ ನೆಟ್‌ವರ್ಕ್‌ನಲ್ಲಿನ ಡೇಟಾ ಬಳಕೆಯು ತ್ರೈಮಾಸಿಕದಲ್ಲಿ 40 ಎಕ್ಸಾಬೈಟ್‌ಗಳಿಗಿಂತ ಕಡಿಮೆ ಇದೆ ಎಂದು ಕಂಪನಿಯು ತಿಳಿಸಿದೆ.

ಚೀನಾದ ಮತ್ತೊಂದು ಕಂಪನಿಯಾದ ಚೀನಾ ಟೆಲಿಕಾಂ ಡೇಟಾ ಬಳಕೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಭಾರತದ ಏರ್‌ಟೆಲ್ ನಾಲ್ಕನೇ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಟೆಲಿಕಾಂ ಕಂಪನಿಗಳ ಡೇಟಾ ಬಳಕೆ ಮತ್ತು ಗ್ರಾಹಕರ ನೆಲೆಯ ಬಗ್ಗೆ ಮೇಲ್ವಿಚಾರಣೆ ಮಾಡುವ ಟಿಎಫಿಶಿಯೆಂಟ್ ಈ ಕುರಿತು ವರದಿ ಪ್ರಕಟಿಸಿದೆ.

5ಜಿ ಸೇವೆ ಆರಂಭದ ಬಳಿಕ ರಿಲಯನ್ಸ್ ಜಿಯೊದ ಡೇಟಾ ಬಳಕೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 35.2ರಷ್ಟು ಜಿಗಿತ ಕಂಡಿದೆ. ಜಿಯೊದ ಟ್ರೂ 5ಜಿ ನೆಟ್‌ವರ್ಕ್ ಮತ್ತು ಜಿಯೊ ಏರ್ ಫೈಬರ್‌ನ ವಿಸ್ತರಣೆಯು ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ತ್ರೈಮಾಸಿಕ ಫಲಿತಾಂಶದಲ್ಲಿ ನೀಡಿದ ಮಾಹಿತಿ ಅನ್ವಯ ಜಿಯೊ ನೆಟ್‌ವರ್ಕ್‌ನಲ್ಲಿ ಪ್ರತಿ ಗ್ರಾಹಕನ ಮಾಸಿಕ ಡೇಟಾ ಬಳಕೆಯು 28.7 ಜಿಬಿಗೆ (ಗಿಗಾಬೈಟ್) ಹೆಚ್ಚಾಗಿದೆ. ಇದು ಮೂರು ವರ್ಷದ ಹಿಂದೆ ಕೇವಲ 13.3 ಜಿಬಿ ಆಗಿತ್ತು. 2018ರ ವೇಳೆ ದೇಶದಲ್ಲಿ ಒಂದು ತ್ರೈಮಾಸಿಕದಲ್ಲಿ ಒಟ್ಟು ಮೊಬೈಲ್ ಡೇಟಾ ಬಳಕೆಯು ಕೇವಲ 4.5 ಎಕ್ಸಾಬೈಟ್‌ ಇತ್ತು ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT