ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉದ್ಯಮಿಗಳಿಗೆ ದೆಹಲಿ, ಬೆಂಗಳೂರು ಉತ್ತಮ ತಾಣ: ವರದಿ

Last Updated 27 ಜನವರಿ 2023, 11:19 IST
ಅಕ್ಷರ ಗಾತ್ರ

ನವದೆಹಲಿ: ಮಹಿಳಾ ಉದ್ಯಮಿಗಳಿಗೆ ಲಾಭದಾಯಕ ವಹಿವಾಟು ವಾತಾವರಣ ಕಲ್ಪಿಸುವ ಪ್ರತಿಷ್ಠಿತ 50 ಜಾಗತಿಕ ನಗರಗಳಲ್ಲಿ ದೆಹಲಿ, ಬೆಂಗಳೂರು ಮತ್ತು ಮುಂಬೈ ಸ್ಥಾನ ಪಡೆದಿದೆ ಎಂದು ವರದಿ ಹೇಳಿದೆ.

ಡೆಲ್ ಟೆಕ್ನಾಲಜೀಸ್ ಪ್ರಕಟಿಸಿರುವ 2023ರ ಮಹಿಳಾ ಉದ್ಯಮಿಗಳಿಗೆ ಅನುಕೂಲಕರ ನಗರಗಳ ಪಟ್ಟಿಯಲ್ಲಿ, ದೆಹಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡಿದೆ. 2017ಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಅನುಕೂಲಕರ ವಾತಾವರಣ ಹೆಚ್ಚಾಗಿದ್ದು, ಮಹಿಳಾ ನೇತೃತ್ವದ ವಹಿವಾಟುಗಳಿಗೆ ಆದ್ಯತೆಯ ನಗರವಾಗಿದೆ.

ಮುಂಬೈ ಈ ಪಟ್ಟಿಯಲ್ಲಿ ಹೊಸದಾಗಿ ಪ್ರವೇಶ ಪಡೆದಿದೆ. ಬೆಂಗಳೂರು ಮಹಿಳಾ ಉದ್ಯಮಿಗಳ ವಿಶ್ವದ ಅಗ್ರ 10 ನಗರಗಳಲ್ಲಿ ಒಂದಾಗಿದೆ. ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಪ್ಯಾರಿಸ್, ವಾಷಿಂಗ್ಟನ್ ಡಿಸಿ ಮತ್ತು ಇತರ ಪ್ರಮುಖ ನಗರಗಳಿಗಿಂತ ಮೊದಲು ಬೆಂಗಳೂರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

‘ಮಹಿಳಾ ಉದ್ಯಮಿಗಳು ತಂತ್ರಜ್ಞಾನವನ್ನು ಪ್ರಮುಖವೆಂದು ಪರಿಗಣಿಸುತ್ತಾರೆ. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಅಗತ್ಯ ಮಾಹಿತಿಯೊಂದಿಗೆ ಸ್ಪರ್ಧಿಸುತ್ತಾರೆ. ವ್ಯವಹಾರ ವೃದ್ಧಿಗೆ ತಂತ್ರಜ್ಞಾನದ ಅಗತ್ಯತೆಯನ್ನು ಈ ವರದಿ ಪುನರುಚ್ಚರಿಸುತ್ತದೆ ಮತ್ತು ಡೆಲ್ ಟೆಕ್ನಾಲಜೀಸ್ ಪ್ರಪಂಚದಾದ್ಯಂತ ಮಹಿಳಾ ಉದ್ಯಮಿಗಳ ನೆಟ್‌ವರ್ಕ್‌ ಬೆಂಬಲಿಸಲು ಮತ್ತು ಮುನ್ನಡೆಸಲು ಬದ್ಧವಾಗಿದೆ’ ಎಂದು ಡೆಲ್ ಟೆಕ್ನಾಲಜೀಸ್ ಇಂಡಿಯಾದ ಸಣ್ಣ ವ್ಯಾಪಾರಗಳ ನಿರ್ದೇಶಕಿ ಸ್ವಾತಿ ಮಿಶ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT