ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ಹಾರ್ಡ್‌ವೇರ್: 27 ಕಂಪನಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ

₹ 3 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ: ಸಚಿವ ವೈಷ್ಣವ್
Published 18 ನವೆಂಬರ್ 2023, 15:25 IST
Last Updated 18 ನವೆಂಬರ್ 2023, 15:25 IST
ಅಕ್ಷರ ಗಾತ್ರ

ನವದೆಹಲಿ: ಡೆಲ್‌, ಎಚ್‌ಪಿ, ಫಾಕ್ಸ್‌ಕಾನ್‌, ಲೆನೊವೊ ಸೇರಿದಂತೆ ಒಟ್ಟು 27 ಕಂಪನಿಗಳಿಗೆ ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ದೇಶದಲ್ಲಿ ಐ.ಟಿ. ಹಾರ್ಡ್‌ವೇರ್‌ ತಯಾರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಪರ್ಸನಲ್ ಕಂಪ್ಯೂಟರ್‌, ಸೇವೆಗಳು, ಅಲ್ಟ್ರಾ–ಸ್ಮಾಲ್ ಫಾರ್ಮ್‌ ಫ್ಯಾಕ್ಟರ್‌ ಡಿವೈಸಸ್‌ ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. 

ಪಿಎಲ್‌ಐ ಐ.ಟಿ. ಹಾರ್ಡ್‌ವೇರ್ ಯೋಜನೆಯಡಿ 27 ಕಂಪನಿಗಳಿಗೆ ಒಪ್ಪಿಗೆ ನೀಡಲಾಗಿದೆ. ಇವುಗಳ ಪೈಕಿ 23 ಕಂಪನಿಗಳು ದೇಶದಲ್ಲಿ ತಯಾರಿಕೆ ಆರಂಭಿಸಲು ಸಿದ್ಧವಾಗಿವೆ. ನಾಲ್ಕು ಕಂಪನಿಗಳು 90 ದಿನಗಳೊಳಗೆ ತಯಾರಿಕೆಯನ್ನು ಆರಂಭಿಸಲಿವೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಈ 27 ಕಂಪನಿಗಳಿಗೆ ಒಪ್ಪಿಗೆ ನೀಡಿರುವುದರಿಂದ ₹ 3 ಸಾವಿರ ಕೋಟಿ ಹೂಡಿಕೆ ಆಗಲಿದೆ. ತಯಾರಿಕೆಯು ಭಾರತದಲ್ಲಿಯೇ ಅಗಲಿದೆ ಎನ್ನುವುದು ಮುಖ್ಯವಾದ ಸಂಗತಿ ಎಂದು ಅವರು ಹೇಳಿದ್ದಾರೆ.

ಪರ್ಸನಲ್ ಕಂಪ್ಯೂಟರ್‌ (ಪಿ.ಸಿ), ಲ್ಯಾಪ್ಟಾಪ್‌ ಮತ್ತು ಟ್ಯಾಬ್ಲೆಟ್‌ಗಳನ್ನು ತಯಾರಿಕೆಯಲ್ಲಿ ಭಾರತವನ್ನು ದೊಡ್ಡ ಶಕ್ತಿಯಾಗಿ ರೂಪಿಸಲು ಈ ಒಪ್ಪಿಗೆಯು ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತನ್ನು ಜಾಗತಿಕವಾಗಿ ಹೈ–ಟೆಕ್‌ ತಯಾರಿಕಾ ಕೇಂದ್ರವಾಗಿ ರೂಪಿಸಲು ಗುರಿಯನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಐ.ಟಿ. ಹಾರ್ಡ್‌ವೇರ್ ತಯಾರಿಕೆಗೆ ಉತ್ತೇಜನ ನೀಡಲು ಪಿಎಲ್‌ಐ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.

ಡೆಲ್‌, ಫಾಕ್ಸ್‌ಕಾನ್‌, ಎಚ್‌ಪಿ, ಫ್ಲೆಕ್ಸ್‌ಟ್ರಾನನಿಕ್ಸ್, ವಿವಿಡಿಎನ್, ಆಪ್ಟಿಮಸ್‌, ಪಾಡ್‌ಗೆಟ್‌ ಎಲೆಕ್ಟ್ರಾನಿಕ್ಸ್‌, ಗುಡ್‌ವರ್ತ್‌ ನಿಯೊಲಿಂಕ್‌, ಮೆಗಾ ನೆಟ್‌ವರ್ಕ್‌, ಡಿಜಿಲೈಫ್, ಐಟಿಐ ಲಿಮಿಟೆಡ್‌... ಸರ್ಕಾರದ ಒಪ್ಪಿಗೆ ಪಡೆದುಕೊಂಡಿರುವ ಪ್ರಮುಖ ಕಂಪನಿಗಳಾಗಿವೆ.

ಐ.ಟಿ. ಹಾರ್ಡ್‌ವೇರ್‌ ಕ್ಷೇತ್ರಕ್ಕೆ ಪಿಎಲ್‌ಐ ಯೋಜನೆ 2.0ಗೆ ಕೇಂದ್ರ ಸಚಿವ ಸಂಪುಟವು ಮೇ 17ರಂದು ಒಪ್ಪಿಗೆ ನೀಡಿದೆ. 

ಪ್ರಯೋಜನ ಏನು?

₹3.5 ಲಕ್ಷ ಕೋಟಿ ಹೆಚ್ಚುವರಿಯಾಗಿ ತಯಾರಾಗಲಿರುವ ಐ.ಟಿ. ಹಾರ್ಡ್‌ವೇರ್‌ಗಳ ಮೌಲ್ಯ 50 ಸಾವಿರ ನೇರ ಉದ್ಯೋಗ ಸೃಷ್ಟ 1.5 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT