ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಲಟ್‌ಗಳ ವಿಶ್ರಾಂತಿ ಅವಧಿ ಹೆಚ್ಚಳ

Published 8 ಜನವರಿ 2024, 15:53 IST
Last Updated 8 ಜನವರಿ 2024, 15:53 IST
ಅಕ್ಷರ ಗಾತ್ರ

ನವದೆಹಲಿ: ವಿಮಾನ ಅವಘಡ ತಡೆಯುವುದಕ್ಕೆ ಸಂಬಂಧಿಸಿದಂತೆ ಪೈಲಟ್‌ಗಳ ವಿಶ್ರಾಂತಿ ಅವಧಿಯನ್ನು ಹೆಚ್ಚಿಸುವುದು ಸೇರಿದಂತೆ ಹೊಸ ನಿಯಮಾವಳಿಗಳ ಅನುಷ್ಠಾನಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ನಿರ್ಧರಿಸಿದೆ.

ಪೈಲಟ್‌ಗಳ ಕರ್ತವ್ಯದ ಸಮಯ ಮಿತಿಯನ್ನು ಪರಿಷ್ಕರಿಸಲಾಗುವುದು. ಈಗಿರುವ ವಾರದ ವಿಶ್ರಾಂತಿ ಅವಧಿಯನ್ನು 36 ಗಂಟೆಯಿಂದ 48 ಗಂಟೆವರೆಗೆ ಹೆಚ್ಚಿಸಲಾಗುವುದು ಎಂದು ಹೇಳಿದೆ.

ಪೈಲಟ್‌ಗಳಿಗೆ ಆಯಾಸ ಉಂಟು ಮಾಡುವ ಗರಿಷ್ಠ ಹಾರಾಟದ ಸಮಯ, ರಾತ್ರಿಪಾಳಿಯ ಕರ್ತವ್ಯ, ವಾರದ ವಿಶ್ರಾಂತಿ ಅವಧಿ ಸೇರಿದಂತೆ ಹಲವು ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಈ ನಿಯಮಾವಳಿ ರೂಪಿಸಲಾಗಿದೆ ಎಂದು ಹೇಳಿದೆ.

ರಾತ್ರಿ ವೇಳೆ ಗರಿಷ್ಠ ಹಾರಾಟದ ಸಮಯವನ್ನು ಎಂಟು ಗಂಟೆಗೆ ಹಾಗೂ ಗರಿಷ್ಠ ಮಟ್ಟದ ಕರ್ತವ್ಯದ ಅವಧಿಯನ್ನು 10 ಗಂಟೆಗೆ ನಿಗದಿಪಡಿಸಲಾಗಿದೆ. ಹಾರಾಟಕ್ಕೆ ನಿರ್ಬಂಧಿಸಲಾಗಿದೆ. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಈ ನಿಯಮಾವಳಿ ರೂಪಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT