ಭಾನುವಾರ, ಆಗಸ್ಟ್ 9, 2020
24 °C

ಭಾರತಕ್ಕೆ ಚೀನಾ ವಸ್ತುಗಳ ಸಾಗಾಟ ತಾತ್ಕಾಲಿಕ ಸ್ಥಗಿತಗೊಳಿಸಿದ ಡಿಎಚ್‌ಎಲ್

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

DHL

ನವದೆಹಲಿ: ಚೀನಾದಿಂದ ಭಾರತಕ್ಕೆ ಆಮದಾಗುವ ವಸ್ತುಗಳ ಸಾಗಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜರ್ಮನಿಯ ಲಾಜಿಸ್ಟಿಕ್ಸ್ ಕಂಪನಿ ಡಿಎಚ್‌ಎಲ್ ತಿಳಿಸಿದೆ. ಉಭಯ ದೇಶಗಳ ನಡುವಣ ಗಡಿ ಸಂಘರ್ಷ ಉಲ್ಬಣಿಸಿದ ಬಳಿಕ ವಸ್ತುಗಳ ಸಾಗಾಟ ಅನುಮತಿ ಸಿಗುವುದು ವಿಳಂಬವಾಗುತ್ತಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಮತ್ತೊಂದು ಪ್ರಮುಖ ಸರಕುಸಾಗಣೆ ಕಂಪನಿ ಫೆಡೆಕ್ಸ್ ಕಾರ್ಪ್‌ ಸಹ ವಸ್ತುಗಳ ಸಾಗಾಟ ಸ್ಥಗಿತಗೊಳಿಸಿದೆ ಎಂದು ಬ್ಲೂಂಬರ್‌ಕ್ವಿಂಟ್ ವರದಿ ಮಾಡಿದೆ. ಈ ಕುರಿತು ಫೆಡೆಕ್ಸ್ ಪ್ರತಿಕ್ರಿಯೆ ನೀಡಿಲ್ಲ.

ವಸ್ತುಗಳ ಸಾಗಾಟಕ್ಕೆ ಕಸ್ಟಮ್ಸ್ ಕ್ಲಿಯರೆನ್ಸ್ ವಿಳಂಬವಾಗುತ್ತಿರುವುದರಿಂದ ‘ಡಿಎಚ್‌ಎಲ್ ಎಕ್ಸ್‌ಪ್ರೆಸ್‌ ಇಂಡಿಯಾ’ ಘಟಕ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಗಿ ಬಂದಿದೆ. ಚೀನಾ, ಹಾಂಕಾಂಗ್, ಮಕಾವುವಿನಿಂದ ಭಾರತಕ್ಕೆ ವಸ್ತುಗಳ ಸಾಗಾಟ ನಿಲ್ಲಿಸಲಾಗಿದೆ ಎಂದು ಡಿಎಚ್‌ಎಲ್ ಪ್ರತಿನಿಧಿಯೊಬ್ಬರು ರಾಯಿಟರ್ಸ್‌ಗೆ ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು