ನವದೆಹಲಿ: ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ಮಿತಿ ಹೇರುವ, ಬಳಕೆದಾರನ ವಯಸ್ಸು ಆಧರಿಸಿ ಆನ್ಲೈನ್ ವೇದಿಕೆಗಳ ಬಳಕೆಗೆ ಅವಕಾಶ ಕಲ್ಪಿಸುವ ಮತ್ತು ಡಿಜಿಟಲ್ ವ್ಯಸನವನ್ನು ತಡೆಯಲು ಆನ್ಲೈನ್ ತರಗತಿಗಳನ್ನು ಕಡಿತಗೊಳಿಸುವ ಅಗತ್ಯದ ಬಗ್ಗೆ ಆರ್ಥಿಕ ಸಮೀಕ್ಷೆ ಪ್ರತಿಪಾದಿಸಿದೆ.

ಹೆಚ್ಚುತ್ತಿರುವ ಡಿಜಿಟಲ್ ವ್ಯಸನಕ್ಕೆ ಸಂಬಂಧಿಸಿದಂತೆ ವಯಸ್ಸು ದೃಢೀಕರಣಕ್ಕೆ ಆನ್ಲೈನ್ ವೇದಿಕೆಗಳನ್ನು ಜವಾಬ್ದಾರರನ್ನಾಗಿಸಬೇಕು ಮತ್ತು ಶೈಕ್ಷಣಿಕ ವಸ್ತು–ವಿಷಯ ತಿಳಿಯಲು ಮಕ್ಕಳ ನಡುವೆ ಬೇಸಿಕ್ ಫೋನ್ಗಳಂತಹ ಸರಳ ಸಾಧನಗಳ ಬಳಕೆ ಉತ್ತೇಜಿಸಬೇಕು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳು, ಜೂಜಿನ ಆ್ಯಪ್ಗಳು ಮತ್ತು ಜಾಹೀರಾತುಗಳಿಗೆ ಸಂಬಂಧಿಸಿದಂತೆ ವಯಸ್ಸು ಮುಖ್ಯವಾಗುತ್ತದೆ ಎಂದಿದೆ.

ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಕೊರಿಯಾದಂಥ ದೇಶಗಳಲ್ಲಿ ಈ ಕುರಿತು ಜಾರಿಗೆ ತರಲಾಗಿರುವ ನಿಯಮಗಳನ್ನು ಉಲ್ಲೇಖಿಸಲಾಗಿದ್ದು, ಯುವಕರು ಮತ್ತು ವಯಸ್ಕರ ಮಾನಸಿಕ ಆರೋಗ್ಯದ ಮೇಲೆ ಡಿಜಿಟಲ್ ವ್ಯಸನವು ಪರಿಣಾಮ ಬೀರುತ್ತಿದೆ. ಈ ವಿಚಾರದಲ್ಲಿ ಕುಟುಂಬಕ್ಕೂ ಅರಿವು ಮೂಡಿಸುವ ಅಗತ್ಯವಿದ್ದು, ಸ್ಕ್ರೀನ್ ಟೈಮ್ಗೆ ಮಿತಿ ಹೇರುವುದು, ಸಾಧನಗಳಿಂದ ಮುಕ್ತವಾಗಿ ಸಮಯ ಕಳೆಯುವುದು, ಎಲ್ಲರೂ ಒಟ್ಟಾಗಿ ಆಫ್ಲೈನ್ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಉತ್ತೇಜಿಸಬೇಕು ಎಂದು ಸಮೀಕ್ಷೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.