ಭಾನುವಾರ, ಅಕ್ಟೋಬರ್ 24, 2021
21 °C

ಎಸ್‌ಬಿಐನಿಂದ ‘ಎನ್‌ಎವಿ–ಇಕ್ಯಾಷ್‌’ ಕಾರ್ಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ‘ಎನ್‌ಎವಿ–ಇಕ್ಯಾಷ್‌’ ಕಾರ್ಡ್‌ಅನ್ನು ಕಾರವಾರದಲ್ಲಿ, ನೌಕಾನೆಲೆಯ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯದಲ್ಲಿ ಈಚೆಗೆ ಬಿಡುಗಡೆ ಮಾಡಿತು.

ನೌಕಾದಳದ ಪ‍ಶ್ಚಿಮ ವಿಭಾಗದ ಮುಖ್ಯ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ವೈಸ್‌ ಅಡ್ಮಿರಲ್ ಆರ್‌. ಹರಿಕುಮಾರ್‌ ಮತ್ತು ಎಸ್‌ಬಿಐನ ರಿಟೇಲ್‌ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್‌. ಶೆಟ್ಟಿ ಅವರು ಕಾರ್ಡ್‌ ಅನ್ನು ಬಿಡುಗಡೆ ಮಾಡಿದರು. ನೌಕೆಗಳಲ್ಲಿ ಇರುವ ಸಿಬ್ಬಂದಿಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ವಹಿವಾಟು ನಡೆಸಲು ಇದು ಉಪಯುಕ್ತವಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು