ನವದೆಹಲಿ : ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಮಾರ್ಚ್ 15ರ ವರೆಗೆ ₹21.26 ಲಕ್ಷ ಕೋಟಿ ನಿವ್ವಳ ನೇರ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಸೋಮವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

2023–24ರ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇ 13ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.

ಈ ಆರ್ಥಿಕ ವರ್ಷದಲ್ಲಿ, ಸರ್ಕಾರವು ನಾಲ್ಕು ಕಂತುಗಳ ಮುಂಗಡ ತೆರಿಗೆಯಿಂದ ₹10.44 ಲಕ್ಷ ಕೋಟಿ ಸಂಗ್ರಹಿಸಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ₹9.11 ಲಕ್ಷ ಕೋಟಿಗಳಷ್ಟಿತ್ತು. ಶೇ 14ರಷ್ಟು ಹೆಚ್ಚಳ ದಾಖಲಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುಂಗಡ ತೆರಿಗೆ ಪಾವತಿಯ ಕೊನೆಯ ಕಂತು ಮಾರ್ಚ್ 15ರಂದು ಆಗಿತ್ತು.

ಕಾರ್ಪೊರೇಟ್ ತೆರಿಗೆ ₹7.57 ಲಕ್ಷ ಕೋಟಿ ಸಂಗ್ರಹವಾಗಿದ್ದು, ಒಟ್ಟಾರೆ ಶೇ 12ರಷ್ಟು ಹೆಚ್ಚಳವಾಗಿದೆ. ಕಾರ್ಪೊರೇಟ್ಯೇತರ ತೆರಿಗೆ ₹2.87 ಲಕ್ಷ ಕೋಟಿ ಸಂಗ್ರಹವಾಗಿದ್ದು, ಶೇ 20ರಷ್ಟು ಏರಿಕೆಯಾಗಿದೆ. ಷೇರು ವಹಿವಾಟು ತೆರಿಗೆ (ಎಸ್ಟಿಟಿ) ಸಂಗ್ರಹವು ಶೇ 56ರಷ್ಟು ಹೆಚ್ಚಾಗಿ, ₹53,095 ಕೋಟಿ ಸಂಗ್ರಹವಾಗಿದೆ.

ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು ಶೇ 17ರಷ್ಟು ಹೆಚ್ಚಾಗಿ ₹11.01 ಲಕ್ಷ ಕೋಟಿ ಆಗಿದೆ. ಒಟ್ಟು ₹4.60 ಲಕ್ಷ ಕೋಟಿ ಮರುಪಾವತಿ (ರೀಫಂಡ್) ಮಾಡಲಾಗಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ₹3.47 ಲಕ್ಷ ಕೋಟಿ ಮಾಡಲಾಗಿತ್ತು. ನೇರ ತೆರಿಗೆಯ ಸರಾಸರಿ ಸಂಗ್ರಹವು ₹25.86 ಲಕ್ಷ ಕೋಟಿ ಆಗಿದೆ ಎಂದು ತಿಳಿಸಿದೆ.

ಐಬಿಸಿ: 28,818 ಅರ್ಜಿ ವಿಲೇವಾರಿ

ನವದೆಹಲಿ : ದಿವಾಳಿ ಸಂಹಿತೆ (ಐಬಿಸಿ) ಅಡಿಯಲ್ಲಿ 40,943 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ₹10 ಲಕ್ಷ ಕೋಟಿ ಮೌಲ್ಯದ 28,818 ಅರ್ಜಿಗಳನ್ನು ವಿಚಾರಣೆಗೆ ಒಳಪಡುವ ಮೊದಲೇ ಬಗೆಹರಿಸಲಾಗಿದೆ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಖಾತೆ ಸಚಿವ ಸಚಿವ ಹರ್ಷ ಮಲ್ಹೋತ್ರಾ ಲೋಕಸಭೆಗೆ ಸೋಮವಾರ ತಿಳಿಸಿದ್ದಾರೆ.

ವಿಶ್ವಬ್ಯಾಂಕ್ ವರದಿ ಪ್ರಕಾರ ದಿವಾಳಿತನವನ್ನು ಪರಿಹರಿಸುವಲ್ಲಿ ಭಾರತದ ಶ್ರೇಯಾಂಕ 2018ರಲ್ಲಿ 108 ಆಗಿತ್ತು. ಇದು 2019ರಲ್ಲಿ 52ನೇ ಸ್ಥಾನಕ್ಕೆ ಬಂದಿದೆ. ಇದು ದೊಡ್ಡ ಸಾಧನೆಯಾಗಿದೆ ಎಂದು ಹೇಳಿದ್ದಾರೆ.

ಅನುಕೂಲಕರ ವ್ಯಾಪಾರದ ವಾತಾವರಣ ಸೃಷ್ಟಿಸುವ ಗುರಿಯನ್ನು ಹೊಂದಿರುವ ಸುಲಲಿತ ಉದ್ದಿಮೆ ವಹಿವಾಟಿಗೆ (ಇಒಡಿಬಿ) ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. 2021ರ ಸೆಪ್ಟೆಂಬರ್ನಲ್ಲಿ ವಿಶ್ವಬ್ಯಾಂಕ್ ವ್ಯಾಪಾರ ವರದಿಯನ್ನು ಅನ್ನು ಪ್ರಕಟಿಸುವುದನ್ನು ನಿಲ್ಲಿಸಿತು. ಕೊನೆಯ ವರದಿ ಅಕ್ಟೋಬರ್ 2019ರಲ್ಲಿ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.