ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಷೇರು ವಿಕ್ರಯ ಗುರಿ ತಪ್ಪಿದ್ದೇ ಹೆಚ್ಚು

Last Updated 8 ಫೆಬ್ರುವರಿ 2020, 18:32 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ವಿತ್ತೀಯ ಕೊರತೆ ನಿಯಂತ್ರಿಸಲು ಕೇಂದ್ರೋದ್ಯಮಗಳ ಷೇರು ವಿಕ್ರಯವೂ ಬಹುಮುಖ್ಯ ಪಾತ್ರ ವಹಿಸುತ್ತದೆ. ಕೇಂದ್ರ ಸರ್ಕಾರ ತನ್ನ ಹಣಕಾಸಿನ ಹೊರೆ ತಗ್ಗಿಸಿಕೊಳ್ಳಲು ಈ ಮಾರ್ಗ ಅನುಸರಿಸುತ್ತದೆ.

ಪ್ರತಿ ಬಜೆಟ್‌ನಲ್ಲಿಯೂ ಷೇರು ವಿಕ್ರಯದಿಂದ ಬಂಡವಾಳ ಸಂಗ್ರಹಿಸುವ ಗುರಿಯನ್ನು ನಿಗದಿ ಮಾಡಲಾಗುತ್ತದೆ. ಆದರೆ, 2010ರಿಂದ ಇಲ್ಲಿಯವರೆಗೆ ಕೇವಲ ಎರಡು ಬಾರಿ ಮಾತ್ರವೇ ಗುರಿ ಮೀರಿ ಬಂಡವಾಳ ಸಂಗ್ರಹವಾಗಿದೆ.

ಕೇಂದ್ರೋದ್ಯಮಗಳಲ್ಲಿ ಹೊಂದಿರುವ ಗರಿಷ್ಠ ಷೇರು ಪಾಲಿನಲ್ಲಿ ಸರ್ಕಾರ ಕೆಲವು ಪಾಲನ್ನು ಮಾರಾಟ ಮಾಡುವ ಮೂಲಕ ಬಂಡವಾಳ ಸಂಗ್ರಹಿಸುತ್ತದೆ. 2020–21ನೇ ಸಾಲಿನ ಬಜೆಟ್‌ನಲ್ಲಿ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳಲ್ಲಿ ಕೆಲವು ಪಾಲನ್ನು ಮಾರಾಟ ಮಾಡುವ ಪ್ರಸ್ತಾವ ಸಲ್ಲಿಸಲಾಗಿದೆ.

ನಷ್ಟದಲ್ಲಿರುವ ಏರ್‌ ಇಂಡಿಯಾ (ಎಐ) ವಿಮಾನಯಾನ ಕಂಪನಿಯನ್ನು ಮಾರಾಟ ಮಾಡುವ ಕೇಂದ್ರದ ಯತ್ನಕ್ಕೆ ಸತತ ಹಿನ್ನಡೆಯಾಗಿದೆ.

‘ಎಐ’ನ ಶೇ 76ರಷ್ಟು ಪಾಲು ಬಂಡವಾಳವನ್ನು ಖಾಸಗಿಯವರಿಗೆ ವರ್ಗಾಯಿಸಲು ಸರ್ಕಾರ 2018ರಲ್ಲಿ ಮುಂದಾಗಿತ್ತು. ಷೇರು ಮಾರಾಟದ ಕಠಿಣ ಷರತ್ತುಗಳ ಕಾರಣಕ್ಕೆ ಖರೀದಿಗೆ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಹೀಗಾಗಿ ಈಗ ಎರಡನೇ ಪ್ರಯತ್ನದಲ್ಲಿ ಸಂಪೂರ್ಣ (ಶೇ 100) ಖಾಸಗೀಕರಣ ಮಾಡುವ ಉದ್ದೇಶದಿಂದ ಬಿಡ್‌ ಆಹ್ವಾನಿಸಲಾಗಿದೆ.

ಷೇರು ವಿಕ್ರಯದ ಕೆಲವು ಮಾರ್ಗಗಳು:

* ಸಾರ್ವಜನಿಕರಿಗೆ ಷೇರು ಖರೀದಿ ಆಯ್ಕೆ (ಐಪಿಒ)

* ಕೇಂದ್ರೋದ್ಯಮಗಳ ವಿನಿಮಯ ವಹಿವಾಟು ನಿಧಿ (ಸಿಪಿಎಸ್‌ಇ ಇಟಿಎಫ್‌)

* ಖಾಸಗಿಯವರಿಗೆ ಆಡಳಿತದ ನಿಯಂತ್ರಣದ ಜತೆಗೆ ಶೇ 50ರಷ್ಟು ಅಥವಾ ಅದಕ್ಕಿಂತಲೂ ಅಧಿಕ ಷೇರುಗಳ ಮಾರಾಟ

* ಸಂಪೂರ್ಣ ಖಾಸಗೀಕರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT