ನವದೆಹಲಿ: ಡಿಮಾರ್ಟ್ ಮಳಿಗೆಗಳ ಮಾಲೀಕತ್ವ ಹೊಂದಿರುವ ಅವೆನ್ಯು ಸೂಪರ್ಮಾರ್ಟ್ಸ್ ಲಿಮಿಟೆಡ್ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹684.85 ಕೋಟಿ ಲಾಭ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿ ಗಳಿಸಿದ್ದ ಲಾಭಕ್ಕೆ ಹೋಲಿಸಿದರೆ ಶೇ 3.85ರಷ್ಟು ಹೆಚ್ಚು.

ಕಂಪನಿಯ ಕಾರ್ಯಾಚರಣೆ ವರಮಾನವು ಶೇ 15.45ರಷ್ಟು ಹೆಚ್ಚಾಗಿ ₹16,676 ಕೋಟಿಗೆ ತಲುಪಿದೆ. ಇದೇ ಅವಧಿಯಲ್ಲಿ ಕಂಪನಿಯ ಒಟ್ಟು ವೆಚ್ಚಗಳು ಶೇ 16ರಷ್ಟು ಹೆಚ್ಚಳ ಕಂಡಿದ್ದು, ₹15,751 ಕೋಟಿಗೆ ತಲುಪಿದೆ.

ಎರಡು ವರ್ಷ ಹಾಗೂ ಅದಕ್ಕಿಂತ ಹೆಚ್ಚು ಹಳೆಯದಾದ ಡಿಮಾರ್ಟ್ ಮಳಿಗೆಗಳು ಶೇ 6.8ರಷ್ಟು ಬೆಳವಣಿಗೆ ಸಾಧಿಸಿವೆ ಎಂದು ಕಂಪನಿಯ ನಿಯೋಜಿತ ಸಿಇಒ ಅನ್ಶುಲ್ ಅಸಾವಾ ತಿಳಿಸಿದ್ದಾರೆ.

ಸಾಧ್ಯವಿರುವ ಎಲ್ಲ ಕಡೆಯೂ ಜಿಎಸ್ಟಿ ದರ ಪರಿಷ್ಕರಣೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ಎಂಟು ಹೊಸ ಡಿಮಾರ್ಟ್ ಮಳಿಗೆಗಳನ್ನು ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.