ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಂದ್‌ನಿಂದ ಡ್ರಿಲ್ಡ್‌ ಏರ್‌ ಕೂಲ್‌ ಮ್ಯಾಟ್ರೆಸ್‌ ತಯಾರಿಕೆ

Published 30 ಮೇ 2024, 16:25 IST
Last Updated 30 ಮೇ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಪ್ರಥಮ ಬಾರಿಗೆ ನೀಂದ್‌ ಮ್ಯಾಟ್ರೆಸಸ್‌ನಿಂದ ಏರ್‌ ಡ್ರಿಲ್‌ ತಂತ್ರಜ್ಞಾನ ಬಳಸಿ ತಯಾರಿಸಿರುವ ಡ್ರಿಲ್ಡ್‌ ಏರ್‌ ಕೂಲ್‌ ಮ್ಯಾಟ್ರೆಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

‘ಈ ತಂತ್ರಜ್ಞಾನವು ಹಾಸಿಗೆಯಲ್ಲಿ ಗಾಳಿಯ ಹರಿವು ಹೆಚ್ಚಿಸಲಿದೆ. ಹಾಸಿಗೆಯು ದೇಹದ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಅಲ್ಲದೆ, ಇದರ ಬಹುಪದರ ವಿನ್ಯಾಸವು ಮೃದುತ್ವದಿಂದ ಕೂಡಿದ್ದು ನಿದ್ದೆಯನ್ನು ಆರಾಮದಾಕವಾಗಿಸುತ್ತದೆ’ ಎಂದು ಧನ್ಯಾ ಪ್ಲಾಸ್ಟಿಕ್ಸ್ ಆ್ಯಂಡ್‌ ಫೋಮ್ಸ್‌ ಪ್ರೈವೆಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಹೆಗಡೆ ಅವರು, ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡ್ರಿಲ್ಡ್‌ ಏರ್‌ ಕೂಲ್‌ ಡ್ಯುಯಲ್ ಕಂಫರ್ಟ್ ಮ್ಯಾಟ್ರೆಸಸ್‌, ಡ್ರಿಲ್ಡ್‌ ಏರ್‌ ಕೂಲ್‌  ಆರ್ಥೋ ಮೆಮೊರಿ ಮ್ಯಾಟ್ರೆಸಸ್‌, ಡ್ರಿಲ್ಡ್‌ ಏರ್‌ ಕೂಲ್‌ ನ್ಯಾಚುರಲ್‌ ಲೇಟೆಕ್ಸ್‌ ಮ್ಯಾಟ್ರೆಸಸ್‌, ಡ್ರಿಲ್ಡ್‌ ಏರ್‌ ಕೂಲ್‌ ಪಾಕೆಟ್‌ ಸ್ಪ್ರಿಂಗ್‌ ಮ್ಯಾಟ್ರೆಸಸ್‌ ಹಾಗೂ ಡ್ರಿಲ್ಡ್‌ ಏರ್‌ ಕೂಲ್‌ ಟಾಪರ್‌ ಆ್ಯಂಡ್‌ ಪಿಲ್ಲೊ ಮ್ಯಾಟ್ರೆಸಸ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದರು.

ಹಾಸಿಗೆಯು ದೀರ್ಘಕಾಲದವರೆಗೆ ಬಾಳಿಕೆಗೆ ಬರಲು ಹಾಗೂ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಳವಾದ ಪರೀಕ್ಷೆ ನಡೆಸಿ ಈ ಉತ್ಪನ್ನಗಳನ್ನು ತಯಾರಿಸಲಾಗಿದೆ. ಶುದ್ಧವಾದ ಫೋಮ್‌ ಬಳಸಲಾಗಿದೆ. ಅಲ್ಲದೆ ದಪ್ಪನಾದ ಹತ್ತಿ ಬಟ್ಟೆ ಬಳಸಿ ತಯಾರಿಸಲಾಗಿದೆ ಎಂದು ಹೇಳಿದರು.

2005ರ ಕಂಪನಿ ಸ್ಥಾಪನೆಯಾಗಿದ್ದು, ಗುಣಮಟ್ಟ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಾದ್ಯಂತ ಪ್ರಾಂಚೈಸಿ ಹೊಂದಿದ್ದು, ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಸುತ್ತಿದೆ. ನೀಂದ್ ಬ್ರ್ಯಾಂಡ್‌ನ ಈ ಹೊಸ ಉತ್ಪನ್ನಗಳ ಮಾರಾಟಕ್ಕೆ 500ಕ್ಕೂ ಹೆಚ್ಚು ಡೀಲರ್‌ಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು ರಾಜ್ಯದಲ್ಲಿ ಸುಮಾರು ₹25 ಕೋಟಿ ವಹಿವಾಟು ನಡೆಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ₹100 ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದೆ. ಅಲ್ಲದೆ, ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲೂ ಉದ್ಯಮದ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.‌

ಕಂಪನಿಯ ಮಾರಾಟ ವಿಭಾಗದ ಜನರಲ್‌ ಮ್ಯಾನೇಜರ್‌ ವಿಶ್ವನಾಥ ಹೆಗಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT