ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾರ್ಚ್‌ 1ರಿಂದ ಇ–ಇನ್‌ವಾಯ್ಸ್‌ ಕಡ್ಡಾಯ

₹5 ಕೋಟಿಗೂ ಹೆಚ್ಚು ವಹಿವಾಟು: ತೆರಿಗೆದಾರರಿಗೆ ಸೂಚನೆ
Published 6 ಜನವರಿ 2024, 15:45 IST
Last Updated 6 ಜನವರಿ 2024, 15:45 IST
ಅಕ್ಷರ ಗಾತ್ರ

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ನೋಂದಣಿ ಮಾಡಿಕೊಂಡು ವಾರ್ಷಿಕವಾಗಿ ₹5 ಕೋಟಿಗೂ ಹೆಚ್ಚು ವಹಿವಾಟು ನಡೆಸುವ ಉದ್ದಿಮೆಗಳು, ಬಿ2ಬಿ ವಹಿವಾಟಿಗೆ ಇ–ಇನ್‌ವಾಯ್ಸ್‌ ಸೃಷ್ಟಿಸುವುದನ್ನು ಮಾರ್ಚ್‌ 1ರಿಂದ ಕಡ್ಡಾಯಗೊಳಿಸಲಾಗಿದೆ.

₹50 ಸಾವಿರಕ್ಕೂ ಹೆಚ್ಚು ಮೌಲ್ಯದ ಸರಕುಗಳ ಅಂತರರಾಜ್ಯ ಸಾಗಾಟಕ್ಕೆ ಜಿಎಸ್‌ಟಿ ಅಡಿಯಲ್ಲಿ ಇ–ವೇ ಬಿಲ್‌ ಪಡೆಯುವುದು ಕಡ್ಡಾಯವಾಗಿದೆ. 

ಆದರೆ, ಕೆಲವು ಜಿಎಸ್‌ಟಿ ತೆರಿಗೆದಾರರು ಬಿ2ಬಿ ಹಾಗೂ ಬಿ2ಇ ವಹಿವಾಟಿಗೆ ಇ–ಇನ್‌ವಾಯ್ಸ್‌ ಸೇರ್ಪಡೆ ಮಾಡದೆಯೇ ಇ–ವೇ ಬಿಲ್‌ ಸೃಷ್ಟಿಸುತ್ತಿರುವುದು ಕಂಡುಬಂದಿದೆ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ತಿಳಿಸಿದೆ. 

ಅಲ್ಲದೇ, ಕೆಲವು ಪ್ರಕರಣಗಳಲ್ಲಿ ಇನ್‌ವಾಯ್ಸ್‌ ಮಾಹಿತಿಯನ್ನು ಇ–ವೇ ಬಿಲ್‌ನಲ್ಲಿ ಪ್ರತ್ಯೇಕವಾಗಿ ನಮೂದಿಸುತ್ತಿದ್ದಾರೆ. ಆದರೆ, ಇಂತಹ ಇ–ವೇ ಬಿಲ್‌ ಮತ್ತು ಇ–ಇನ್‌ವಾಯ್ಸ್‌ಗಳು ಸರಿಯಾಗಿ ತಾಳೆ ಆಗುತ್ತಿಲ್ಲ ಎಂದು ಹೇಳಿದೆ. 

ತೆರಿಗೆದಾರರು ಎಸಗುತ್ತಿರುವ ಈ ಪ್ರಮಾದಕ್ಕೆ ನಿಯಂತ್ರಣ ಹೇರಲು ನಿರ್ಧರಿಸಲಾಗಿದೆ. ಹಾಗಾಗಿ, ಮಾರ್ಚ್‌ ಒಂದರಿಂದ ಇ–ಇನ್‌ವಾಯ್ಸ್‌ ಇಲ್ಲದೆ ಸೃಷ್ಟಿಸುವ ಇ–ವೇ ಬಿಲ್‌ಗಳನ್ನು ಸ್ವೀಕರಿಸುವುದಿಲ್ಲ. ಹಾಗಾಗಿ, ಕೇಂದ್ರ ಸರ್ಕಾರವು ಜಿಎಸ್‌ಟಿ ಅಡಿಯಲ್ಲಿ ಸೂಚಿಸಿರುವ ಮಾನದಂಡವನ್ನು ಪಾಲಿಸಬೇಕಿದೆ ಎಂದು ಸೂಚಿಸಿದೆ.  

ಬಿ2ಸಿ ಸೇರಿದಂತೆ ಇತರೆ ವಹಿವಾಟುಗಳಿಗೆ ಇ–ವೇ ಬಿಲ್‌ ಪಡೆಯುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿಗದಿಪಡಿಸಿರುವ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT