ಶನಿವಾರ, ಆಗಸ್ಟ್ 13, 2022
27 °C

ಅಮೆಜಾನ್ ಫ್ಯಾಷನ್ ಇಂಡಿಯಾದಲ್ಲಿ ಈಸಿಬೈ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೆಜಾನ್‌ನ ಫ್ಯಾಶನ್ ಆನ್‌ಲೈನ್ ಮಳಿಗೆಯಲ್ಲಿ ಫ್ಯಾಷನ್ ರಿಟೇಲ್ ಬ್ರಾಂಡ್ ಈಸಿಬೈ ಕೂಡ ಇತ್ತೀಚೆಗೆ ಸೇರ್ಪಡೆಯಾಗಿದೆ.

2, 3ನೇ ಶ್ರೇಣಿಯ ನಗರಗಳು ಮತ್ತು ಮಹಾನಗರಗಳಲ್ಲಿ ಕನಿಷ್ಠ ಬೆಲೆಯಲ್ಲಿ ಸೊಗಸಾದ ಉಡುಪುಗಳನ್ನು ಬಯಸುವವರಿಗೆ ನೆರವಾಗಲೆಂದು ಈಸಿಬೈ ಇಂಡಿಯಾ ಬ್ರಾಂಡ್ ಸ್ಥಾಪಿಸಲಾಗಿದ್ದು, ಅಮೆಜಾನ್ ಫ್ಯಾಷನ್ ತಾಣದಲ್ಲಿ ಈಸಿಬೈನ 2,000 ಕ್ಕೂ ಹೆಚ್ಚು ವಿನ್ಯಾಸಗಳು ಲಭ್ಯ ಇರುತ್ತವೆ. ಇದರ ಬೆಲೆ INR 69 ರಿಂದ INR 699 ರವರೆಗಿದ್ದು, ಪುರುಷರು ಮತ್ತು ಮಹಿಳೆಯರಿಗೆ ಟಾಪ್ಸ್, ಟೀ ಶರ್ಟ್‌ಗಳು, ಉಡುಪುಗಳು, ಜೀನ್ಸ್, ಪ್ಯಾಂಟ್, ಶರ್ಟ್‌ಗಳು ಮತ್ತು ಮಕ್ಕಳ ಉಡುಪುಗಳಾದ್ಯಂತ ಉಡುಪು ಆಯ್ಕೆಗಳನ್ನು ಒಳಗೊಂಡಿದೆ.

ಈಸಿಬೈ ನೀಡುವ ‘ಸೂಪರ್ ಸ್ಟೈಲ್ಸ್’ ಮತ್ತು ‘ಸೂಪರ್’ ಬೆಲೆಗಳು, ಭಾರತದಾದ್ಯಂತದ ಗ್ರಾಹಕರಿಗೆ ಆಧುನಿಕ ವಿನ್ಯಾಸವನ್ನು ಕೈಗೆಟಕುವಂತೆ ಮಾಡಲಿದೆ ಎಂದು ಅಮೆಜಾನ್ ಫ್ಯಾಷನ್ ಇಂಡಿಯಾದ ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್ ನಿರ್ದೇಶಕ ಮಾಯಾಂಕ್ ಶಿವಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಅಮೆಜಾನ್ ಫ್ಯಾಷನ್‌ನಲ್ಲಿ 699 ಕ್ಕಿಂತ ಕಡಿಮೆ ಇರುವ 2000 ಕ್ಕೂ ಹೆಚ್ಚು ಶೈಲಿಗಳೊಂದಿಗೆ ನಾವು ಗ್ರಾಹಕರನ್ನು ತಲುಪುತ್ತಿದ್ದೇವೆ ಎಂದು ಈಸಿಬೈನ ಹಿರಿಯ ಉಪಾಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ಆನಂದ್ ಅಯ್ಯರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು