ಆರ್ಥಿಕ ಹಿಂಜರಿತ ಇದೆ, ಟಿವಿ, ಫ್ರಿಡ್ಜ್ ಖರೀದಿ ಬೇಡ: ಜೆಫ್ ಬೆಜೋಸ್ ಸಲಹೆ

ನವದೆಹಲಿ: ಜಾಗತಿಕ ಹಿಂಜರಿತ ಬಗ್ಗೆ ಎಚ್ಚರದಿಂದಿರಿ, ದೊಡ್ಡ ಖರ್ಚುಗಳನ್ನು ಮುಂದೂಡಿ ಎಂದು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಗ್ರಾಹಕರು ಹಾಗೂ ಉದ್ಯಮ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
‘ನಿಮ್ಮ ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ. ಮುಂದಿನ ತಿಂಗಳುಗಳಲ್ಲಿ ಅನಗತ್ಯ ಖರ್ಚುಗಳನ್ನುಮಾಡಬೇಡಿ. ಹೊಸ ಕಾರು, ಟಿ.ವಿ, ಫ್ರಿಡ್ಜ್‌ಗಳ ಖರೀದಿ ಮಾಡಬೇಡಿ‘ ಎಂದು ಸಲಹೆ ನೀಡಿದ್ದಾರೆ.
‘ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಕೆಲವು ರಿಸ್ಕ್ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿದರೆ, ಸಣ್ಣ ಉದ್ಯಮದಲ್ಲಿ ಅಗಾಧ ಬದಲಾವಣೆ ಉಂಟಾಗಲಿದೆ‘ ಎಂದು ಅವರು ಹೇಳಿದ್ದಾರೆ.
‘ಆರ್ಥಿಕತೆ ಈಗ ಸರಿಯಾದ ಸ್ಥಿತಿಯಲ್ಲಿ ಇಲ್ಲ. ಚಟುವಟಿಕೆಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಹಲವಾರು ಕಂಪನಿಗಳು ಕೆಲಸದಿಂದ ಜನರನ್ನು ವಜಾ ಮಾಡುತ್ತಿದೆ. ಇದು ಇನ್ನು ಹೆಚ್ಚಳವಾಗಲೂಬಹುದು. ಇದು ಆರ್ಥಿಕ ಹಿಂಜರಿತದ ಸಂಕೇತ. ಹೀಗಾಗಿ ಹಣ ಉಳಿಸಿ. ರಜಾ ದಿನಗಳಲ್ಲಿ ದುಂದು ವೆಚ್ಚ ಬೇಡ ಎಂದು ಬೆಜೋಸ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.