ಜಾಗತಿಕ ಆರ್ಥಿಕ ಬಿರುಗಾಳಿಏಳುವ ಸಾಧ್ಯತೆ: ಐಎಂಎಫ್‌

7

ಜಾಗತಿಕ ಆರ್ಥಿಕ ಬಿರುಗಾಳಿಏಳುವ ಸಾಧ್ಯತೆ: ಐಎಂಎಫ್‌

Published:
Updated:
Prajavani

ದುಬೈ: ಸಂಭವನೀಯ ‘ಆರ್ಥಿಕ ಬಿರುಗಾಳಿ’ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿ ಇರಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ.

‘ಜಾಗತಿಕ ಆರ್ಥಿಕತೆ ಮೇಲೆ ನಾಲ್ಕು ಪ್ರಮುಖ ಕಾರ್ಮೋಡಗಳು ಕವಿದಿವೆ. ಇವೆಲ್ಲವು ಒಟ್ಟುಗೂಡಿದರೆ ಬಿರುಗಾಳಿ ಅಪ್ಪಳಿಸಬಹುದು. ವಾಣಿಜ್ಯ ಉದ್ವಿಗ್ನತೆ, ಆಮದು ಸುಂಕ ಸಮರ, ಹಣಕಾಸು ಪರಿಸ್ಥಿತಿ ಕಠಿಣಗೊಂಡಿರುವುದು ಮತ್ತು ಬ್ರೆಕ್ಸಿಟ್‌ ಫಲಶ್ರುತಿಗೆ ಸಂಬಂಧಿಸಿದ ಅನಿಶ್ಚಿತತೆಯು ಪ್ರತಿಕೂಲ ಪರಿಣಾಮ ಬೀರಲಿವೆ’ ಎಂದು ‘ಐಎಂಎಫ್‌’ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್‌ ಲಗಾರ್ಡ್‌ ಅವರು ಆತಂಕ
ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !