ಶುಕ್ರವಾರ, ಏಪ್ರಿಲ್ 3, 2020
19 °C
ಸಾಲ ಹಗರಣ

ಚಂದಾ ಕೊಚ್ಚಾರ್‌ಗೆ ಸೇರಿದ ₹78 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಐಸಿಐಸಿಐ ಬ್ಯಾಂಕ್‌ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚಾರ್ ಅವರಿಗೆ ಸೇರಿದ ₹ 78 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಸಾಲ ಹಗರಣಕ್ಕೆ ಸಂಬಂಧಿಸಿ ಇ.ಡಿ. ಈ ಕ್ರಮ ಕೈಗೊಂಡಿದೆ.

ಚಂದಾ ಕೊಚ್ಚಾರ್ ಅವರಿಗೆ ಸೇರಿದ ಮುಂಬೈ ಫ್ಲ್ಯಾಟ್, ಅವರ ಪತಿ ದೀಪಕ್‌ ಕಂಪನಿಯ ಆಸ್ತಿ ಸೇರಿದಂತೆ ಒಟ್ಟು ₹ 78 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

2012ರ ವಿಡಿಯೊಕಾನ್ ಸಾಲ ಹಗರಣ ಸಂಬಂಧ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಸೇರಿದಂತೆ ಮೂವರ ವಿರುದ್ಧ ಇತ್ತೀಚೆಗಷ್ಟೆ ಸಿಬಿಐ ಕೂಡ ಎಫ್‌ಐಆರ್ ದಾಖಲಿಸಿತ್ತು.

ಇನ್ನಷ್ಟು...

ವಿಡಿಯೊಕಾನ್ ಸಾಲ ಹಗರಣ: ಚಂದಾ ಕೊಚ್ಚರ್ ಸೇರಿ ಮೂವರ ವಿರುದ್ಧ ಎಫ್‌ಐಆರ್

ಕೊಚ್ಚಿ ಹೋದ ಚಂದ!

ಮೂರು ಬ್ಯಾಂಕುಗಳ ಕಥೆ: ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಕಥೆ ಏನು?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು