ಅಮೆಜಾನ್ ಇಂಟರ್ನ್‌ಶಿಪ್‌ಗೆ 8 ವಿದ್ಯಾರ್ಥಿಗಳು ಆಯ್ಕೆ

ಬೆಂಗಳೂರು: ನಗರದ ಸಿಎಂಆರ್‌ಐಟಿ ಕಾಲೇಜಿನ ಎಂಜಿನಿಯರ್ ವಿಭಾಗದ ಎಂಟು ವಿದ್ಯಾರ್ಥಿಗಳು ಅಮೆಜಾನ್ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.
‘ಇಂಟರ್ನ್‌ಶಿಪ್‌ನ ಅವಧಿ ಆರು ತಿಂಗಳು. ಈ ಅವಧಿಯಲ್ಲೇ ವಿದ್ಯಾರ್ಥಿಗಳು ಶಿಷ್ಯವೇತನವಾಗಿ (ಸ್ಟೈಪೆಂಡ್) ₹80 ಸಾವಿರ ಪಡೆಯಲಿದ್ದಾರೆ’ ಎಂದು ಸಿಎಮ್‌ಆರ್‌ಐಟಿ ಕೆರಿಯರ್ ಗೈಡೆನ್ಸ್ ಮತ್ತು ಪ್ಲೇಸ್‌ಮೆಂಟ್ ಬ್ಯೂರೋದ ನಿರ್ದೇಶಕ ಲಕ್ಷ್ಮಣ್ ಮಲ್ಲಾ ತಿಳಿಸಿದರು.
‘ಕೋವಿಡ್‌ನಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ಆದರೆ, ಸಂಸ್ಥೆಯ ವಿದ್ಯಾರ್ಥಿಗಳು ಅಮೆಜಾನ್ ಸಂಸ್ಥೆಯ ಮೂಲಕ ತಮ್ಮ ವೃತ್ತಿ ಜೀವನದ ಮೊದಲ ಹೆಜ್ಜೆ ಇಟ್ಟಿದ್ದಾರೆ. ಎಂಟರಲ್ಲಿ ಐದು ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಮೂವರು ವಿದ್ಯಾರ್ಥಿಗಳು ಮಾಹಿತಿ ವಿಜ್ಞಾನ ವಿಭಾಗದವರು’ ಎಂದು ಹೇಳಿದರು.
‘ಅಮೆಜಾನ್ ಸಂಸ್ಥೆಯು ಇಂಟರ್ನ್‌ಶಿಪ್ ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಉದ್ಯೋಗವನ್ನೂ ನೀಡಲಿದ್ದು, ಇತರ ಸೌಲಭ್ಯಗಳ ಜೊತೆಗೆ ವಾರ್ಷಿಕ ₹25 ಲಕ್ಷಗಳವರೆಗೆ ವೇತನವನ್ನೂ ನೀಡಲಿದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.