ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ಖರೀದಿಸಿದ ಮಸ್ಕ್‌; ಭಾರತ ಮೂಲದ ಅಧಿಕಾರಿಗಳ ವಜಾ

Last Updated 28 ಅಕ್ಟೋಬರ್ 2022, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ‘ಹಕ್ಕಿ ಸ್ವತಂತ್ರವಾಗಿದೆ’ ಎಂದು ಟ್ವಿಟರ್‌ ಕಂಪನಿಯನ್ನು ಖರೀದಿಸಿದ ಬಳಿಕ ಟೆಸ್ಲಾ ಕಂಪನಿಯ ಮುಖ್ಯ ಕಾರ್ಯ
ನಿರ್ವಹಣಾ ಅಧಿಕಾರಿ (ಸಿಇಒ) ಇಲಾನ್ ಮಸ್ಕ್‌ ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ಒಪ್ಪಂದದಂತೆ ₹3.60 ಲಕ್ಷ ಕೋಟಿ ಮೊತ್ತಕ್ಕೆ ಟ್ವಿಟರ್ ಕಂಪನಿಯನ್ನು ಅವರು ಖರೀದಿ ಮಾಡಿದ್ದಾರೆ.

ಮಸ್ಕ್‌ ಅವರು ಏಪ್ರಿಲ್‌ನಲ್ಲಿ ಟ್ವಿಟರ್‌ ಅನ್ನು ಖರೀದಿಸುವ ಸಂಬಂಧ ಆರಂಭಿಕ ಹಂತದ ಒಪ್ಪಂದ ಮಾಡಿಕೊಂಡಿದ್ದರು. ಆ ಬಳಿಕ ನಕಲಿ ಖಾತೆಗಳ ಮಾಹಿತಿಯನ್ನು ಟ್ವಿಟರ್ ನೀಡುತ್ತಿಲ್ಲ ಎಂದು ಆರೋಪಿಸಿ ಖರೀದಿ ಒಪ್ಪಂದದಿಂದ ಹಿಂದೆ ಸರಿಯುವ ಪ್ರಯತ್ನ ನಡೆಸಿದರು. ಹೀಗಾಗಿ ಟ್ವಿಟರ್‌ ಕಂಪನಿಯು ಮಸ್ಕ್‌ ವಿರುದ್ಧ ಕಾನೂನು ಹೋರಾಟ ಕೈಗೊಂಡಿತ್ತು. ಖರೀದಿ ಒಪ್ಪಂದ ಅಂತಿಮಗೊಳಿಸಲು ಅಮೆರಿಕ ನ್ಯಾಯಾಲಯವು ಅಕ್ಟೋಬರ್‌ 28ರ ಗಡುವು ನೀಡಿತ್ತು. ಈ ಬೆನ್ನಲ್ಲೇ ಗುರುವಾರ ತಡರಾತ್ರಿಯೇ ಮಸ್ಕ್‌ ಅವರು ಖರೀದಿ ಒಪ್ಪಂದ ಪೂರ್ಣಗೊಳಿಸಿದ್ದಾರೆ.

ವಿಶ್ವದ ಸಿರಿವಂತ ವ್ಯಕ್ತಿಯು ಟ್ವಿಟರ್ ಖರೀದಿ ಒಪ್ಪಂದವನ್ನು ಗುರುವಾರ ಪೂರ್ಣಗೊಳಿಸಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ ಹೇಳಿದೆ. ಟ್ವಿಟರ್‌ನ ವಹಿವಾಟು, ಅದರ ಉದ್ಯೋಗಿಗಳು ಮತ್ತು ಷೇರುದಾರರಲ್ಲಿ ಮೂಡಿದ್ದ ಅನಿಶ್ಚಿತತೆಯು ದೂರವಾಗಿದೆ ಎಂದು ಸಿಎನ್‌ಎನ್‌ ಪ್ರತಿಕ್ರಿಯೆ ನೀಡಿದೆ.

ಭಾರತ ಮೂಲದ ಅಧಿಕಾರಿಗಳ ವಜಾ

ಟ್ವಿಟರ್‌ ಖರೀದಿಸಿದ ಬೆನ್ನಲ್ಲೇ ಕಂಪನಿಯ ಉನ್ನತ ಹುದ್ದೆಯಲ್ಲಿ ಇರುವವರನ್ನು ಮಸ್ಕ್‌ ವಜಾ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಇರುವ ನಕಲಿ ಖಾತೆಗಳ ಬಗ್ಗೆ ಇವರೆಲ್ಲರೂ ದಾರಿ ತಪ್ಪಿಸಿದ್ದರು ಎಂದು ಮಸ್ಕ್ ಆರೋಪಿಸಿದ್ದಾರೆ.

ಟ್ವಿಟರ್‌ನ ಸಿಇಒ ಆಗಿದ್ದ ಭಾರತ ಮೂಲದ ಪರಾಗ್‌ ಅಗ್ರವಾಲ್‌, ಕಾನೂನು ವ್ಯವಹಾರ ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್‌ ಸೆಗಲ್‌ ಹಾಗೂ ಜನರಲ್‌ ಕಾನ್ಸುಲ್‌ ಸೀನ್‌ ಎಡ್ಜೆಟ್‌ ಅವರನ್ನು ವಜಾ ಮಾಡಿದ್ದಾರೆ. ಪರಾಗ್‌ ಅವರು 2021ರ ನವೆಂಬರ್‌ನಲ್ಲಿ ಟ್ವಿಟರ್‌ನ ಸಿಇಒ ಆಗಿ ನೇಮಕ ಆಗಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT