ನವದೆಹಲಿ: ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾದ ಸಿಇಒ ಎಲಾನ್ ಮಸ್ಕ್, 2027ರ ವೇಳೆಗೆ ವಿಶ್ವದ ಮೊದಲ ಟ್ರಿಲಿಯನೇರ್ (ಲಕ್ಷ ಕೋಟಿ ಡಾಲರ್ ಒಡೆಯ – ಅಂದಾಜು ₹ 83.95 ಲಕ್ಷ ಕೋಟಿ ಸಂಪತ್ತಿನ ಮಾಲೀಕ) ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಜಗತ್ತಿನ ಎರಡನೇ ಟ್ರಿಲಿಯನೇರ್ ಎನಿಸಿಕೊಳ್ಳುವ ಶ್ರೇಯ ಭಾರತದ ಗೌತಮ್ ಅದಾನಿ ಅವರದಾಗಲಿದ್ದು, 2028ರಲ್ಲಿ ಅವರು ಅಷ್ಟು ಮೊತ್ತದ ಒಡೆಯರೆನಿಸಲಿದ್ದಾರೆ. ಮುಕೇಶ್ ಅಂಬಾನಿ 2033ರ ವೇಳೆಗೆ ಟ್ರಿಲಿಯನೇರ್ ಆಗಲಿದ್ದಾರೆ ಎಂದು ಇನ್ಫಾರ್ಮಾ ಕನೆಕ್ಟ್ ಅಕಾಡೆಮಿಯ ವರದಿ ಅಂದಾಜಿಸಿದೆ.

ಮಸ್ಕ್ ₹19.89 ಲಕ್ಷ ಕೋಟಿ ನಿವ್ವಳ ಸಂಪತ್ತಿನೊಂದಿಗೆ ವಿಶ್ವದ ಅತ್ಯಂತ ಶ್ರೀಮಂತರಾಗಿದ್ದಾರೆ. ವಾರ್ಷಿಕ ಸರಾಸರಿ ಶೇ 110ರಷ್ಟು ಬೆಳವಣಿಗೆಯಾದರೆ, ಜಗತ್ತಿನ ಮೊದಲ ಟ್ರಿಲಿಯನೇರ್ ಆಗಲಿದ್ದಾರೆ.

ವಿಶ್ವದ ಬಿಲಿಯನೇರ್ಗಳ (ಶತಕೋಟಿ ಡಾಲರ್ ಒಡೆಯರು) ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿರುವ ಗೌತಮ್ ಅದಾನಿ ₹8.39 ಲಕ್ಷ ಕೋಟಿಯಷ್ಟು ಸಂಪತ್ತು ಹೊಂದಿದ್ದಾರೆ. ವಾರ್ಷಿಕ ಸರಾಸರಿ ಶೇ 123ರಷ್ಟು ಬೆಳವಣಿಗೆ ದಾಖಲಿಸಿದರೆ 2028ರವೇಳೆಗೆ ಟ್ರಿಲಿಯೇನರ್ ಆಗಲಿದ್ದಾರೆ. ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಸದ್ಯ ₹9.31 ಲಕ್ಷ ಕೋಟಿ ಸಂಪತ್ತನ್ನು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.