ಮಂಗಳವಾರ, ಆಗಸ್ಟ್ 4, 2020
22 °C

ಇಮಾಮಿ: ಹೊಸ ಖಾದ್ಯ ತೈಲ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು : ಇಮಾಮಿ ಹೆಲ್ತಿ ಆ್ಯಂಡ್‌ ಟೇಸ್ಟಿ ಜನಪ್ರಿಯ ಬ್ರ್ಯಾಂಡ್‌ ಹೆಸರಿನ ಖಾದ್ಯತೈಲ ತಯಾರಿಕೆ ಕಂಪನಿ ಇಮಾಮಿ ಅಗ್ರೋಟೆಕ್, ತನ್ನ ಖಾದ್ಯ ತೈಲ ಶ್ರೇಣಿಯಲ್ಲಿ ಹೊಸದಾಗಿ ಇಮಾಮಿ ಹೆಲ್ತಿ ಆ್ಯಂಡ್‌ ಟೇಸ್ಟಿ ಸ್ಮಾರ್ಟ್ ಬ್ಯಾಲೆನ್ಸ್ ಇಮ್ಯುನಿಟಿ ಬೂಸ್ಟರ್ ಆಯಿಲ್ ಪರಿಚಯಿಸಿದೆ.

ವೈಜ್ಞಾನಿಕವಾಗಿ ಸಾಬೀತಾಗಿರುವ ರೋಗ ನಿರೋಧಕ ಶಕ್ತಿ ವರ್ಧಿಸುವ  ಎ, ಸಿ, ಇ, ಡಿ ಮತ್ತು ಒಮೆಗಾ 3 ವಿಟ್ಯಾಮಿನ್‌ಗಳನ್ನು ಇದು ಹೊಂದಿದೆ. ವ್ಯಕ್ತಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಏಕೈಕ ಖಾದ್ಯ ತೈಲ ಇದಾಗಿದೆ. ಗ್ರಾಹಕರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಿರುವ ಶಕ್ತಿವರ್ಧಕಗಳನ್ನು ಈ ಅಡುಗೆ ಅನಿಲವು ಒದಗಿಸಲಿದೆ ಎಂದು ಕಂಪನಿ ಹೇಳಿದೆ.  

‘ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಉತ್ಪನ್ನಗಳ ಹುಡುಕಾಟದಲ್ಲಿ ಇರುವ ಗ್ರಾಹಕರ ಅಗತ್ಯವನ್ನು ಈ ಅಡುಗೆ ಅನಿಲ ಒದಗಿಸಲಿದೆ’ ಎಂದು ಇಮಾಮಿ ಗ್ರೂಪ್‌ ನಿರ್ದೇಶಕ  ಆದಿತ್ಯ ವಿ ಅಗರ್‌ವಾಲ್‌ ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.