ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಡಿಬಿಐ ಬ್ಯಾಂಕ್‌ ಖಾಸಗೀಕರಣ: ಮುಂದಿನ ತಿಂಗಳು ಪ್ರಾಥಮಿಕ ಬಿಡ್

Last Updated 30 ಆಗಸ್ಟ್ 2022, 11:10 IST
ಅಕ್ಷರ ಗಾತ್ರ

ನವದೆಹಲಿ: ಐಡಿಬಿಐ ಬ್ಯಾಂಕ್‌ನಲ್ಲಿನ ಷೇರುಪಾಲನ್ನು ಮಾರಾಟ ಮಾಡುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರವು ಅದಕ್ಕಾಗಿ ಪ್ರಾಥಮಿಕ ಬಿಡ್‌ಗಳನ್ನು ಮುಂದಿನ ತಿಂಗಳು ಆಹ್ವಾನಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೆಲವು ವಿಷಯಗಳ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮತ್ತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಜೊತೆ ಮಾತುಕತೆ ಇನ್ನೂ ಆಗಬೇಕಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಬ್ಯಾಂಕ್‌ ಖಾಸಗೀಕರಣದ ವಿಚಾರದಲ್ಲಿ ಐಡಿಬಿಐ ಬ್ಯಾಂಕ್‌ನ ಖಾಸಗೀಕರಣವು ಮೊದಲನೆಯದು. ಹೀಗಾಗಿ, ಬ್ಯಾಂಕ್‌ನ ಷೇರುಪಾಲು ಖರೀದಿಗೆ ಹೂಡಿಕೆದಾರರಿಂದ ಅರ್ಜಿ ಆಹ್ವಾನಿಸಿದಾಗ, ಅವರ ಕಡೆಯಿಂದ ಬಹಳಷ್ಟು ಪ್ರಶ್ನೆಗಳು ಬರುವ ನಿರೀಕ್ಷೆ ಇದೆ. ಈ ಹಣಕಾಸು ವರ್ಷದಲ್ಲಿ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲಿಕ್ಕಿಲ್ಲ’ ಎಂದು ಅವರು ಹೇಳಿದ್ದಾರೆ.

ಐಡಿಬಿಐ ಬ್ಯಾಂಕ್‌ನಲ್ಲಿ ಷೇರುಪಾಲನ್ನು ಮಾರಾಟ ಮಾಡಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು 2021ರ ಮೇ ತಿಂಗಳಲ್ಲಿ ಒಪ್ಪಿಗೆ ನೀಡಿದೆ. ಈಗ ಐಡಿಬಿಐ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರವು ಶೇಕಡ 45.48ರಷ್ಟು ಷೇರುಗಳನ್ನು ಹಾಗೂ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಶೇಕಡ 49.24ರಷ್ಟು ಷೇರುಗಳನ್ನು ಹೊಂದಿವೆ.

ಎಷ್ಟು ಷೇರುಪಾಲನ್ನು ಮಾರಾಟ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ಹಾಗೂ ಎಲ್‌ಐಸಿ ಜೊತೆಯಾಗಿ ತೀರ್ಮಾನಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT