ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ರಲ್ಲಿ ಹೂಡಿಕೆದಾರರ ಸಂಪತ್ತು ₹ 78 ಲಕ್ಷ ಕೋಟಿ ಹೆಚ್ಚಳ

Last Updated 1 ಜನವರಿ 2022, 2:32 IST
ಅಕ್ಷರ ಗಾತ್ರ

ನವದೆಹಲಿ: ಈಕ್ವಿಟಿ ಹೂಡಿಕೆದಾರರು 2021ರಲ್ಲಿ ಕೈತುಂಬ ಗಳಿಸಿದರು. ಕೋವಿಡ್‌ ಸಾಂಕ್ರಾಮಿಕದ ಪ್ರಭಾವ ವರ್ಷವಿಡೀ ಇದ್ದರೂ, ಷೇರು ಮಾರುಕಟ್ಟೆಗಳಲ್ಲಿ ಕಂಡುಬಂದ ಏರುಮುಖದ ಚಲನೆಯ ಕಾರಣದಿಂದಾಗಿ ಹೂಡಿಕೆದಾರರ ಸಂಪತ್ತಿನ ಮೌಲ್ಯವು ಈ ವರ್ಷದಲ್ಲಿ ಒಟ್ಟು ₹ 78 ಲಕ್ಷ ಕೋಟಿಯಷ್ಟು ಹೆಚ್ಚಾಯಿತು.

2021ನೆಯ ಇಸವಿಯು ದೇಶದ ಷೇರು ಮಾರುಕಟ್ಟೆಗಳ ಪಾಲಿಗೆ ಐತಿಹಾಸಿಕವಾಗಿತ್ತು. ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳು ಹಲವು ಮೈಲಿಗಲ್ಲುಗಳನ್ನು ದಾಟಿದವು. ವರ್ಷದ ಕೊನೆಯ ದಿನವಾದ ಶುಕ್ರವಾರದ (ಡಿಸೆಂಬರ್ 31) ವೇಳೆಗೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 10,502 ಅಂಶದಷ್ಟು ವಾರ್ಷಿಕ ಏರಿಕೆ ದಾಖಲಿಸಿತು.

ಸೆನ್ಸೆಕ್ಸ್ ಈ ವರ್ಷದಲ್ಲಿ 50 ಸಾವಿರ ಹಾಗೂ 62 ಸಾವಿರದ ಮಟ್ಟಗಳನ್ನು ದಾಟಿತು. ಅಕ್ಟೋಬರ್‌ 19ರಂದು ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 62,245 ಅಂಶಗಳಿಗೆ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT