ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕ್ವಿಟಿ ಎಂಎಫ್‌: ಸತತ 2ನೇ ತಿಂಗಳೂ ಬಂಡವಾಳ ಹಿಂತೆಗೆತ

Last Updated 9 ಸೆಪ್ಟೆಂಬರ್ 2020, 17:42 IST
ಅಕ್ಷರ ಗಾತ್ರ

ನವದೆಹಲಿ: ಲಾಭಗಳಿಕೆ ಉದ್ದೇಶದಿಂದ ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ (ಎಂಎಫ್‌) ಆಗಸ್ಟ್‌ನಲ್ಲಿ ₹ 4 ಸಾವಿರ ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಸತತ ಎರಡನೇ ತಿಂಗಳಿನಲ್ಲಿಯೂ ಬಂಡವಾಳ ಹಿಂತೆಗೆತ ಆದಂತಾಗಿದೆ. ಜುಲೈನಲ್ಲಿ ₹ 2,480 ಕೋಟಿ ಹಿಂದಕ್ಕೆ ಪಡೆದಿದ್ದರು.

ಸಾಲ‍ಪತ್ರ‌ ಆಧಾರಿತ ಮ್ಯೂಚುವಲ್‌ ಫಂಡ್‌ಗಳಿಂದ ₹ 3,907 ಕೋಟಿ ಹಿಂದಕ್ಕೆ ಪಡೆದಿದ್ದಾರೆ. ಜುಲೈನಲ್ಲಿ ₹ 91,392 ಕೋಟಿ ಹೂಡಿಕೆ ಮಾಡಿದ್ದರು ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ ಮಾಹಿತಿ ನೀಡಿದೆ.

ಒಟ್ಟಾರೆಯಾಗಿ ಮ್ಯೂಚುವಲ್ ಫಂಡ್‌ ಉದ್ಯಮದಿಂದ ಆಗಸ್ಟ್‌ನಲ್ಲಿ ₹ 14,553 ಕೋಟಿ ಬಂಡವಾಳ ಹೊರಹೋಗಿದೆ. ಜುಲೈನಲ್ಲಿ ₹ 89,813 ಕೋಟಿ ಹೂಡಿಕೆ ಆಗಿತ್ತು.

ಅಂಕಿ–ಅಂಶ

ಉದ್ಯಮದ ನಿರ್ವಹಣಾ ಸಂಪತ್ತು

₹ 27.5 ಲಕ್ಷ ಕೋಟಿ: ಆಗಸ್ಟ್‌ ಅಂತ್ಯಕ್ಕೆ

₹ 27.12 ಲಕ್ಷ ಕೋಟಿ:ಜುಲೈ ಅಂತ್ಯಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT